ಉದಯವಾಹಿನಿ ಸಿರುಗುಪ್ಪ : ನಗರದ ಅಭಯಾಂಜನೇಯ್ಯಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಸಿರುಗುಪ್ಪ ತಾಲೂಕು ಘಟಕದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನಾಚರಣೆಯ ಅಂಗವಾಗಿ ಪುಟಾಣಿಗಳಿಗೆ ಕೃಷ್ಣ ವೇಷ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರೀರಾಮ, ಶ್ರೀಕೃಷ್ಣ, ಶ್ರೀಹನುಮಾನ್ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವುದರೊಂದಿಗೆ ಖ್ಯಾತ ವೈದ್ಯ ಡಾ.ಮದುಸೂಧನ್ ಅವರು ಉದ್ಘಾಟಿಸಿದರು.
ನಂತರ ಮಾತನಾಡಿ ಒಬ್ಬರಿಗಿಂತ ಇನ್ನೊಬ್ಬರು ಮಿಗಿಲಾಗ್ಲಿ ತಮ್ಮ ಮುದ್ದು ಮಕ್ಕಳನ್ನು ಕೃಷ್ಣನ ವೇಷಧಾರಿಯಾಗಿಸಿ ಸ್ಪರ್ಧೆಯಲ್ಲಿ ಭಾಗವಹಿಸಲು ಮುಂದಾಗಿರುವ ಶಿಕ್ಷಕಿಯರು ಮತ್ತು ತಾಯಂದಿರ ಉತ್ಸಾಹವು ಕೃಷ್ಣ, ರಾಧೆಯರ ಪುಟಾಣಿಗಳ ವೇಷ ನೋಡಿ ಸಾಕ್ಷಾತ್ ದೇವರನ್ನು ಕಂಡ0ತಾಯಿತೆ0ದರು.
ಹಿರಿಯ ಶಿಕ್ಷಕರಾದ ಜೆ.ನರಸಿಂಹಮೂರ್ತಿ ಮಾತನಾಡಿ ಅನ್ಯ ಧರ್ಮಗಳಿಂದ ಸನಾತನ ಧರ್ಮದ ಆಚರಣೆ, ಮತಾಂತರ ತಡೆ, ದೇವಾಲಯಗಳ ರಕ್ಷಣೆ, ಗೋಹತ್ಯೆ ನಿಷೇದದ ಉದ್ದೇಶದೊಂದಿಗೆ ೧೯೬೪ರಲ್ಲಿ ಎಮ್.ಎಸ್.ಗೋಳ್ವಾಲ್ಕರ್, ಎಸ್.ಎಸ್.ಆಪ್ಟೆ, ಸ್ವಾಮಿ ಚಿನ್ಮಯಾನಂದ ಅವರ ನೇತೃತ್ವದಲ್ಲಿ ಸಂಸ್ಥಾಪನೆಯಾಗಿ ಹಿಂದೂ ಧಾರ್ಮಿಕ ಆಚರಣೆಗಳಾದ ಕುಂಭಮೇಳ, ಜಾಗೃತಿ ವಿಶ್ವ ಸಮಾವೇಶವನ್ನು ನಡೆಸುತ್ತಾ ಬಂದಿದೆAದು ತಿಳಿಸಿದರು. ಸ್ಪರ್ಧೆಯಲ್ಲಿ ಅನೇಕ ಶಾಲೆಯ ೪೧ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಹೀಮ್ ಎಂಬ ಶ್ರೀಕೃಷ್ಣದೇವರಾಯ ಶಾಲೆಯ ಮಗು ಕೃಷ್ಣ ವೇಷದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ದೇವರಿಗೆ ಧರ್ಮವಿಲ್ಲವೆಂಬ ಸಂದೇಶ ಸಾರಿದಂತಿತ್ತು. ಇದೇ ವೇಳೆ ಹಿರಿಯ ಶಿಕ್ಷಕರಾದ ರಂಗಸ್ವಾಮಿ, ವೆಂಕಟೇಶ್ ಯಾದವ್, ರಾಘವೇಂದ್ರರಾವ್, ಎರಡು ಸಂಘಟನೆಗಳ ಮುಖ್ಯಸ್ಥರಾದ ಬಿ.ಕೆ.ಎಸ್.ಚನ್ನಬಸವ, ಆನಂದಹೆಗಡೆ, ಆರ್.ಹೇಮನಗೌಡ, ಹನುಮೇಶಶೆಟ್ಟಿ, ಶ್ರೀನಿವಾಸ, ಪ್ರವೀಣ್‌ಕುಮಾರ್, ಮನೋಹರ, ಮಂಜುನಾಥಗೌಡ, ನಾಗಭೂಷಣಸ್ವಾಮಿ, ಪೋಲಾರಾಮು ಇನ್ನಿತರರು ಇದ್ದರು.
