ಉದಯವಾಹಿನಿ,ಬಂಗಾರಪೇಟೆ: ಪುಟ್ಟಣ್ಣಯ್ಯ ಆಶಯಗಳಿಗೆ ಬದ್ಧನಾಗಿ, ರೈತರ ಸಮಸ್ಯೆಗಳ ಧ್ವನಿಯಾಗಿ ದುಡಿಯುವ ಹಿನ್ನೆಲೆಯಲ್ಲಿ ಕರ್ನಾಟಕ ರೈತ ಸಂಘ ಪುಟ್ಟಣ್ಣ ಬಣಕ್ಕೆ ಸೇರ್ಪಡೆಯಾಗುತ್ತಿದ್ದೇನೆ, ಎಂದು ಹಿರಿಯ ರೈತ ಹೋರಾಟಗಾರ ಐತಾಂಡಹಳ್ಳಿ ಮಂಜುನಾಥ್ ತಿಳಿಸಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರೈತ ಸಂಘ ಪುಟ್ಟಣ್ಣಯ್ಯ ಬಣದ ವತಿಯಿಂದ ಆಯೋಜಿಸಲಾಗಿದ್ದ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಮುಂದಿನ ದಿನಗಳಲ್ಲಿ ಸಂಘವನ್ನು ಬಲಿಷ್ಠ ಗೊಳಿಸುವುದರ ಮೂಲಕ ರೈತರ ಸಂಕಷ್ಟಗಳಿಗೆ ಧ್ವನಿಯಾಗಿ ಕರ್ತವ್ಯ ನಿರ್ವಹಿಸುತ್ತೇನೆ, ನನ್ನ ವಿರುದ್ಧ ನಡೆತ ಷಡ್ಯಂತರಗಳಿಗೆ ಬಗ್ಗುವಿದ್ದಿಲ್ಲ, ನಾನು ನಿರಂತರವಾಗಿ ರೈತರ ಬಡವರ ಪರವಾಗಿ ನಿಸ್ವಾರ್ಥದಿಂದ ಅನೇಕ ಹೋರಾಟಗಳನ್ನು ಮಾಡುವುದರೊಂದಿಗೆ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿದ್ದೇನೆ, ಜೊತೆಗೆ ರೈತರಿಗೆ ನ್ಯಾಯ ಒದಗಿಸುವಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದೇನೆ, ನನ್ನ ಈ ಹೋರಾಟಗಳ ಯಶಸ್ಸಿನ ಹಾದಿಯಲ್ಲಿ ಅನೇಕ ಕಲ್ಲು ಮುಳ್ಳುಗಳನ್ನು ಸಹಿಸಿದ್ದೇನೆ, ಆದರೂ ನನ್ನ ಗುರಿ ರೈತರ ಬದುಕನ್ನು ಹಸನು ಮಾಡಬೇಕು ರೈತರ ಬೆನ್ನಿಗೆ ನಿಂತು ಆಧಾರ ವಾಗಬೇಕು ಎಂಬ ಸದುದ್ದೇಶವನ್ನು ಹೊಂದಿದ್ದೇನೆ, ಆದರೆ ಕೆಲವು ಸಹಿಸದ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ನನ್ನ ವಿರುದ್ಧ ಷಡ್ಯಂತರವನ್ನು ರೂಪಿಸಿತ್ತು ಆದರೆ ನಾನು ಇವುಗಳಿಗೆ ಬಗ್ಗುವುದಿಲ್ಲ ನಿರಂತರವಾಗಿ ರೈತರ ಧ್ವನಿಯಾಗಿ ಹೋರಾಟಗಳ ಮೂಲಕ ನೊಂದವರ ಪಾಲಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. ನಂತರ ಜಿಲ್ಲಾ ಮುಖಂಡ ಹಬ್ಬನ ಮಾತನಾಡಿ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಜಿಲ್ಲಾದ್ಯಂತ ಹೋರಾಟಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮರಗಳ್ ಮುನಿಯಪ್ಪ , ಹಾಗೂ ಆಂಜಪ್ಪ, ತಾಲೂಕು ಘಟಕಕ್ಕೆ ಸೇರ್ಪಡೆಯಾದರು, ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ್ಕೆ ರತ್ನಮ್ಮ, ಜಿಲ್ಲಾ ಸಂಚಾಲಕರಾದ ಮಂಜುನಾಥ್, ಕರಗ ನಾರಾಯಣಸ್ವಾಮಿ, ಅಂಬರೀಶ್, ಆಂಜನಪ್ಪ ಮರಗಲ್ ಮುನಿಯಪ್ಪ, ಗಣೇಶ್ ,ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!