ಉದಯವಾಹಿನಿ ಕುಶಾಲನಗರ :-ವಿಶ್ವಕರ್ಮ ಜಯಂತಿಯನ್ನು ಸೆಪ್ಟೆಂಬರ್, ೧೭ ರಂದು ಆಚರಿಸುವ ಸಂಬAಧ ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರ ಜೊತೆ ಶುಕ್ರವಾರ ಚರ್ಚೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಸಮಾಜದ ಮುಖಂಡ ಜೊತೆ ಚರ್ಚಿಸಿದ ಬಳಿಕ ಜಿ.ಪಂ.ಸಿಇಒ ಅವರ ಕಚೇರಿಯಲ್ಲಿ ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರ ಸಮ್ಮುಖದಲ್ಲಿ ಸಮಾಲೋಚನೆ ನಡೆಯಿತು.ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಜಿಲ್ಲಾ ಕೇಂದ್ರದಲ್ಲಿಯೇ ಆಯೋಜಿಸಬೇಕು. ತಾಲ್ಲೂಕು ಮಟ್ಟದ ಕಾರ್ಯಕ್ರಮವನ್ನು ತಾಲ್ಲೂಕು ಮಟ್ಟದಲ್ಲಿ ಮಾಡಬಹುದಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅವರ ಜೊತೆ ಚರ್ಚಿಸಿ ತಿಳಿಸಲಾಗುವುದು ಎಂದು ಜಿ.ಪಂ.ಸಿಇಒ ಅವರು ಹೇಳಿದರು. ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷರಾದ ಎಸ್.ಜೆ.ದೇವದಾಸ್, ಜಿಲ್ಲಾ ಕಾರ್ಯದರ್ಶಿ ಬಿ.ಬಿ.ನಾಗರಾಜು, ವಿಶ್ವಕರ್ಮ ಸಮಾಜದ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಎಸ್.ಬಿ.ಯಶವಂತ್, ಶಿಲ್ಪಿ ಮಂಜುನಾಥ ಆಚಾರ್ಯ, ಬಿ.ಕೆ.ಸುದರ್ಶನ, ಕೆ.ಕೆ.ರಮೇಶ್, ಎನ್.ಪಿ.ರಾಜು. ಜಗದೀಶ್ ಆಚಾರ್ಯ, ದಾಮೋದರ ಆಚಾರ್ಯ, ಸಂದ್ಯಾ ಅಶೋಕ್, ವೀಣಾ ಅಶೋಕ್, ಬಿ.ಸಿ.ಅಶೋಕ್ ಆಚಾರ್ಯ, ರವಿ ಆಚಾರ್ಯ, ಸಂದೇಶ್ ಆಚಾರ್ಯ, ಸುರೇಶ್ ಆಚಾರ್ಯ, ಶಾಂತಿ ದೇವದಾಸ್, ಶೋಭ ಯಶವಂತ್, ಪ್ರಕಾಶ್ ಆಚಾರ್ಯ ಇತರರು ಪಾಲ್ಗೊಂಡಿದ್ದರು.
