ಉದಯವಾಹಿನಿ ತಾಳಿಕೋಟಿ: ಪಟ್ಟಣದಲ್ಲಿ ಆಚರಿಸಲಿರುವ ಗಣೇಶ ಚತುರ್ಥಿಯನ್ನು ಎಲ್ಲ ಸಮಾಜದವರನ್ನು ತೆಗೆದುಕೊಂಡು ಸೌಹಾರ್ದ ಹಾಗೂ ಶಾಂತಿಯುತವಾಗಿ ಆಚರಿಸಿ ಎಂದು ಮುದ್ದೇಬಿಹಾಳ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಹೇಳಿದರು. ಶನಿವಾರ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶ್ ಚತುರ್ಥಿ ಆಚರಣೆಯ ಅಂಗವಾಗಿ ಕರೆದ ಸರ್ವ ಸಮಾಜದ ಗಣ್ಯರ ಶಾಂತಿ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಪಟ್ಟಣ ಪ್ರಮುಖ ವ್ಯಾಪಾರಿ ಕೇಂದ್ರವಾಗಿರುವುದರಿಂದ ಯಾವ ಕಾರಣಕ್ಕೂ ಶಾಂತಿ ಕದಡಬಾರದು ಇದರಿಂದ ಎಲ್ಲರಿಗೂ ತೊಂದರೆಯಾಗುತ್ತದೆ ಗಣೇಶ್ ಪ್ರತಿಷ್ಠಾಪನ ಸಮಿತಿಯವರು ತಮ್ಮ ಪೆಂಡಾಲುಗಳನ್ನು ತಾವೇ ರಕ್ಷಣೆ ಮಾಡಿಕೊಳ್ಳಬೇಕು ಪ್ರತಿದಿನ ಹಮ್ಮಿಕೊಳ್ಳುವ ಎಲ್ಲ ಕಾರ್ಯಕ್ರಮಗಳ ವಿವರಗಳನ್ನು ಪೂರ್ವದಲ್ಲಿಯ ಠಾಣೆಗೆ ತಿಳಿಸಬೇಕು ಯಾರಾದರೂ ಕಾನೂನಿಗೆ ವಿರುದ್ಧವಾಗಿ ನಡೆದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಗಣೇಶ ಪ್ರತಿಷ್ಠಾಪನ ಸಮಿತಿಯ ವತಿಯಿಂದ ರಾಘವೇಂದ್ರ ಬಿಜಾಪುರ್ ಮಾತನಾಡಿ ಹಿಂದೂ ಮಹಾ ಗಣಪತಿ ಪರಿಷ್ಟಾಪನ ಸಮಿತಿಯು ತನ್ನ ದಶಮಾನೋತ್ಸವ ಆಚರಿಸುತ್ತಿದೆ ಈ ಸಂದರ್ಭದಲ್ಲಿ ಅನೇಕ ವಿಶೇಷ ಕಾರ್ಯಕ್ರಮ ನಡೆಯಲಿದೆ ಎಲ್ಲವೂ ಕಾನೂನಿನ ವ್ಯಾಪ್ತಿಯೊಳಗೆ ಇದ್ದು ಶಾಂತ ಪೂರ್ಣ ರೀತಿಯಿಂದ ಆಚರಿಸಲು ಪ್ರಯತ್ನಿಸಲಾಗುವುದು ಎಲ್ಲರ ಸಹಕಾರ ನಮಗೆ ಬೇಕು ಎಂದರು. ಮುಖಂಡ ಕಾಶಿನಾಥ್ ಮುರಾಳ ಹಾಗೂ ಪುರಸಭೆ ಮುಖ್ಯ ಅಧಿಕಾರಿ ಉದಯಕುಮಾರ್ ಘಟಕಾಂಬಳೆ ಮಾತನಾಡಿದರು. ಸಭೆಯಲ್ಲಿ ಮುಖಂಡರಾದ ಸಿದ್ದನಗೌಡ ಪಾಟೀಲ್. ವಿಜಯ ಸಿಂಗ್ ಹಜೇರಿ. ಎಂ ಕೆ ಚೋರಗಸ್ತಿ. ಶಶಿಧರ ಡಿಸಲೆ. ನೀಲಮ್ಮ ಪಾಟೀಲ್. ಮಲ್ಲಿಕಾರ್ಜುನ್ ಪಟ್ಟಣಶೆಟ್ಟಿ. ಜಯ ಸಿಂಗ ಮೂಲಿಮನಿ. ಇಬ್ರಾಹಿಂ ಮನ್ಸೂರ್. ಪಿಎಸ್ಐ ರಾಮನಗೌಡ ಸಂಕನಾಳ. ಹೆಸ್ಕಾಂ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಇದ್ದರು
