
ಉದಯವಾಹಿನಿ,ಚಿಂಚೋಳಿ: ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ,ಕ್ರೀಡೆಯಿಂದ ಮಾನಸಿಕ,ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ ಎಂದು ಶಾಸಕ ಡಾ.ಅವಿನಾಶ ಜಾಧವ ಹೇಳಿದರು.ಪಟ್ಟಣದ ಹೊರವಲಯದಲ್ಲಿರುವ ತಾಲ್ಲೂಕಾ ಕ್ರೀಡಾಂಗಣದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆಯು 2023-24 ನೇ ಸಾಲಿನ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಉಧ್ಘಾಟಿಸಿ ಮಾತನಾಡಿದ ಅವರು,ಕ್ರೀಡೆಗಳಿಂದ ವಿಧ್ಯಾರ್ಥಿಗಳಿಗೆ ಮಾನಸಿಕ,ದೈಹಿಕ ಸಾಮರ್ಥ್ಯ ಹೆಚ್ಚಿಸುವ ಮೂಲಕ ಆರೋಗ್ಯವಂತರಾಗಿ ಬಾಳಲು ಸಹಕಾರಿಯಾಗಲಿದೆ.
ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸೋಲೆ ಗೆಲುವಿನ ಸೋಪಾನ ಎಂದು ಅರಿತು ಕ್ರೀಡೆಯಲ್ಲಿ ಭಾಗವಹಿಸಿ ಸ್ಪರ್ಧೆಯಾಗಿ ತೆಗೆದುಕೊಳ್ಳದೆ ನಾವೆಲ್ಲರೂ ಒಗ್ಗೂಡಿ ಒಂದೇ ಎಂಬ ಭಾವನೆಯಿಂದ ಕ್ರೀಡೆ ಆಡಬೇಕು.ತಾಲ್ಲೂಕಾ ಮಟ್ಟದಲ್ಲಿ ಒಳ್ಳೆಯ ಆಟವನ್ನು ಪ್ರದರ್ಶಿಸಿ ಜಿಲ್ಲಾ ರಾಜ್ಯ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ತಂದೆ ತಾಯಂದಿರ ಶಿಕ್ಷಕರ ಶಾಲೆಯ ಗ್ರಾಮದ ತಾಲ್ಲೂಕಿನ ಹೆಸರು ಉನ್ನತಮಟ್ಟಕ್ಕೆ ಕೊಂಡ್ಯೂಯಬೇಕು.ದೈಹಿಕ ಶಿಕ್ಷಕರು ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಸಮನಾಗಿ ಕಾಣಬೇಕು ತಾರತಮ್ಯ ಧೋರಣೆ ಅನುಸರಿಸದೆ ಎಲ್ಲರೂ ನಿಮ್ಮ ಶಾಲೆಯ ಮಕ್ಕಳು ಎಂದು ಭಾವಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು ಎಂದರು.ಅಕ್ಷರ ದಾಸೋಹ ಅಧಿಕಾರಿ ಜಯಪ್ಪ ಚಾಪಲ್ ಸ್ವಾಗತಿಸಿದರು,ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಾಮರಾವ ಮೋಘಾ ನಿರೂಪಿಸಿದರು,ನಾರಾಯಣ ರೆಡ್ಡಿ ವಂದಿಸಿದರು.
ಈ ಸಂದರ್ಭದಲ್ಲಿ ಪೋಲಕಪಳ್ಳಿ ಗ್ರಾ.ಪಂ ಅಧ್ಯಕ್ಷೆ ಜಗಮ್ಮ ನರಸಪ್ಪ,ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತ ರಾಠೋಡ್,ಕಸಾಪ ಅಧ್ಯಕ್ಷ ಸುರೇಶ ದೇಶಪಾಂಡೆ,ಅಶೋಕ ಹೂವಿನಬಾವಿ,ದೇವೀಂದ್ರಪ್ಪಾ ಹೋಳ್ಕರ,ಖುರ್ಷಿದ್ ಮಿಯಾ,ನಾಗಶೇಟ್ಟಿ ಮಲಿ,ಮಲ್ಲಿಕಾರ್ಜುನ ನೆಲ್ಲಿ,ರಾಜಶೇಖರ ನಾಟೀಕಾರ,ತಾಲ್ಲೂಕಾ ಧೈಹಿಕ ಶಿಕ್ಷಣಾಧಿಕಾರಿ ನಾಗೇಂದ್ರರಾವ,ನಾಗಶೇಟ್ಟಿ ಭದ್ರಶೇಟ್ಟಿ,ಗೋಪಾಲರಾವ ಕಟ್ಟಿಮನಿ,ಕೆ.ಎಂ.ಬಾರಿ,ಶ್ರೀಮಂತ ಕಟ್ಟಿಮನಿ,ಪ್ರೇಮಸಿಂಗ್ ಜಾಧವ,ಜಗದೀಶಸಿಂಗ ಠಾಕೂರ್,ಅಶೋಕ ಚವ್ಹಾಣ,ರಾಜು ಪವಾರ,ಗಿರಿರಾಜ ನಾಟೀಕಾರ,ಸುರೇಶ ಕೊರವಿ,ಮಲ್ಲಿಕಾರ್ಜುನ ಪಾಲಾಮೂರ,ಅಮರ ಲೋಡನೂರ,ಆಕಾಶ ಕೋಳ್ಳೂರ,ರೇವಣಸಿದ್ದಪ್ಪ ಕಲಬುರ್ಗಿ,ರಾಜಶೇಖರ ಮುಸ್ತಾರಿ,ನರಸಿಂಗ್,ಗೋವಿಂದ ಸಂಗೇದ್,ಸಂಜುಕುಮಾರ,ವಿಜಯಕುಮಾರ,ಚಾಂ ದ,ದೀಲಿಪ್,ಅನೇಕ ವಿಧ್ಯಾರ್ಥಿಗಳು ಕ್ರೀಡಾಪಟುಗಳು ಇದ್ದರು.
