ಉದಯವಾಹಿನಿ, ಚಿಂಚೋಳಿ: ತಾಲೂಕಿನ ಛಾಯಚಿತ್ರಗ್ರಾಹಕರ ಸಂಘದ ಸದಸ್ಯರಾದ ಚಂದ್ರಶೇಖರ ಹೂಗಾರ, ಬಸವರೆಡ್ಡಿ ಮಕಾಶಿ ಅವರು ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕ ಛಾಯಾಚಿತ್ರಗ್ರಾಹಕ ಸಂಘ ಬೆಂಗಳೂರು ಇದೆ ಸೆ.7 ರಂದು ಶೇಷಾದ್ರಿಪುರಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೂಗಾರ ಅವರಿಗೆ ಗುರುವಂದನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವೇಳೆ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಸಂಜೀವಕುಮಾರ ಗಾರಂಪಳ್ಳಿ, ಉಪಾಧ್ಯಕ್ಷ ಅಂಬ್ರೀಷ ಕಂದಿ, ಕಾರ್ಯದರ್ಶಿ ಶ್ರೀನಿವಾಸ ದೇಗಲ್ಮಡಿ, ಶಿವಕುಮಾರ ಹೀರೆಮಠ, ಮಾಧವರಾವ್ ಪಾಟೀಲ್, ಮಲ್ಲಿಕಾರ್ಜುನ ಶಿರೋಳ್ಳಿ ಇತರರು ಇದ್ದರು.
