ಉದಯವಾಹಿನಿ, ನವದೆಹಲಿ: ಭಾರತ ಅಧ್ಯಕ್ಷತೆವಹಿಸಿದ್ದ ಎರಡು ದಿನಗಳ ಜಿ20 ಶೃಂಗಸಭೆ ಮುಕ್ತಾಯಗೊಂಡಿದ್ದು, ನವೆಂಬರ್​ನಲ್ಲಿ ವರ್ಚ್ಯುವಲ್ ಸಭೆ ನಡೆಯಲಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಮುಂದಿನ ವರ್ಷ ಬ್ರೆಜಿಲ್​ನಲ್ಲಿ ಜಿ20 ಸಮ್ಮೇಳನ ಆಯೋಜಿಸಲಾಗುವುದು. ಜಿ20 ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್ ಅಧ್ಯಕ್ಷ ಲೂಯಿಸ್‌ ಇನಾಸಿಯೊ ಲುಲಾ ಡ ಸಿಲ್ವ ಅವರಿಗೆ ಹಸ್ತಾಂತರಿಸಿದರು.ಬಳಿಕ ಮಾತನಾಡಿದ ಪ್ರಧಾನಿ ಮೋದಿ ಬರುವ ನವೆಂಬರ್‌ ತಿಂಗಳಲ್ಲಿ ವರ್ಚ್ಯುವಲ್ ಸಭೆ ನಡೆಯಲಿರುವುದಾಗಿ ತಿಳಿಸಿದರು. ನವೆಂಬರ್​ ಅಂತ್ಯದವರೆಗೆ ಅಧ್ಯಕ್ಷ ಸ್ಥಾನ ಭಾರತದೊಂದಿಗೆ ಇರಲಿದೆ.

 

Leave a Reply

Your email address will not be published. Required fields are marked *

error: Content is protected !!