ಉದಯವಾಹಿನಿ ಕುಶಾಲನಗರ: ನಗರ ದಲ್ಲಿ ಇಂದು ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಭಾನುವಾರ ( ಸೆ.10 ರಂದು) ಸಂಜೆ 4.00 ಗಂಟೆಗೆ ಕುಶಾಲನಗರ ಕಲಾಭವನದಲ್ಲಿ ಆರಂಭಗೊಂಡಿತು. ಮೈಸೂರಿನ ರಾಜವಂಶಸ್ಥರಾದ ಶ್ರೀ ಯದುವೀರ್ ಚಾಮರಾಜ ಒಡೆಯರ್ ಮಾತನಾಡಿ ಕನ್ನಡಿಗರು ಒಟ್ಟಾಗಿ ಮತ್ತು ಏಕತೆಯನ್ನು ಭಾರತೀಯರು ಕಾಣುವಂತೆ ಮನಗಾಣಬೇಕು ಕರ್ನಾಟಕವನ್ನು ಮಿನಿ ಭಾರತ ಎನ್ನಬಹುದು ಕೊಡಗು ಇತ್ತೀಚೆಗೆ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಕೊಡಗಿನ ಪ್ರಕೃತಿ ಮತ್ತು ಪರಿಸರವನ್ನು ಉಳಿಸೋಣ ಎಂದು ಕರೆ ನೀಡಿದರು, ಶಾಸಕರಾದ ಡಾ ಮಂಥರ್ ಗೌಡರು, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಶ್ರೀ ಟಿ.ಪಿ.ರಮೇಶ್, ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಎಸ್.ಐ.ಮುನೀರ್ ಅಹ್ಮದ್ ಹಾಗೂ ಕುಶಾಲನಗರ ತಾಲ್ಲೂಕು ಕ.ಸಾ.ಪ.ದ ನೂತನ ಅಧ್ಯಕ್ಷರಾದ ಶ್ರೀ ಕೆ.ಎಸ್.ನಾಗೇಶ್ ಪಾಲ್ಗೊಂಡಿದ್ದಾರೆ.
