
ಉದಯವಾಹಿನಿ ,ಬಂಗಾರಪೇಟೆ: ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಧೋಣಿಮಡುಗು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾದ ಶ್ರೀ ಮತಿ ಮಂಜುಳಾ ಎಸ್.ಕೆ, ಜಯಣ್ಣ ರವರಿಗೆ ಇವರು ಮಾಡುತ್ತಿರುವ ಸಾರ್ವಜನಿಕರ ಕುಂದು ಕೊರತೆ ಹಾಗೂ ಸೇವೆಯನ್ನು ಮೆಚ್ಚಿ ಹಲವು ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಬಿ, ಇ ,ಎಂ, ಎಲ್, ನೌಕರ ಸಂಘದ ಅಧ್ಯಕ್ಷರು ಇವರೆಲ್ಲ ಸೇರಿ ನೂತನ ಅಧ್ಯಕ್ಷರಾದ ಮಂಜುಳ ಜಯಣ್ಣ ರವರಿಗೆ ಸನ್ಮಾನ ಮಾಡಲಾಯಿತು.ಈ ಕಾರ್ಯಕ್ರಮದ ಬಗ್ಗೆ ಬಿ,ಇ,ಎಂ,ಎಲ್, ನೌಕರ ಸಂಘದ ಅಧ್ಯಕ್ಷರಾದ, ವಿಜಯ್ ಕುಮಾರ್, ಮಾತನಾಡಿ ದೋಣಿಮಡುಗು ಗ್ರಾಮ ಪಂಚಾಯತಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕರ ಸೇವೆ ಮಾಡಿರುವುದನ್ನು ಪತ್ರಿಕೆ ಮತ್ತು ಸೋಶಿಯಲ್ ಮೀಡಿಯಾದಲ್ಲಿ ನೋಡಿ ನಮಗೆ ಸಂತೋಷವಾಯಿತು ಅದರಿಂದ ಇವರ ಕಾರ್ಯ ಮೆಚ್ಚಿ ನಾವೆಲ್ಲ ಸನ್ಮಾನ ಮಾಡಲಾಯಿತು ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ, ಕ್ಯಾಸಂಬಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಂಜಣ್ಣ, ಜಗದಾಭಿರಾಮನ್, ಮಾಜಿ ಅಧ್ಯಕ್ಷರಾದ ಶಿವಣ್ಣ, ವಿದ್ಯುತ್ ಇಲಾಖೆಯ ಸಿದ್ದಣ್ಣ, ಹಾಗೂ ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿ ವಿಶ್ವನಾಥ್, ಸುರೇಶ್ ,ಹಾಜರಿದ್ದರು,
