
ಉದಯವಾಹಿನಿ ಸಿಂಧನೂರು: ಸರ್ಕಾರ ಶಾಲೆಯಲ್ಲಿ. ವ್ಯಾಸಂಗ ಮಾಡಿ. ಇಡೀ ದೇಶವೇ ಭಾರತದ ಕಡೆಗೆ ತಿರುಗಿ ನೋಡುವಂತ.ವಿಕ್ರಂ ಲ್ಯಾಂಡರನ್ ಸೆನ್ಸಾರ್ ಸಂಶೋಧನ ವಿಕ್ರಂ ಸಾರಾಬಾಯಿ ಬಾಹ್ಯಾಕಾಶ ಕೇಂದ್ರ ಮಂಡಳಿಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ನಮ್ಮ ರಾಯಚೂರು ಜಿಲ್ಲೆಗೆ ಹೆಮ್ಮೆ ಪಡುವಂತೆ ವಿಷಯ ಗ್ರಾಮೀಣ ಭಾಗದ ಸುರೇಶ್ ರೆಡ್ಡಿ ವಟಗಲ್ ಅವರ ಸಾಧನೆಗೆ ಇಡೀ ಜಿಲ್ಲಾ ಮತ್ತು ವಿಶೇಷವಾಗಿ ವಟಗಲ್ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸವ ಜೊತೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಸುರೇಶ್ ರೆಡ್ಡಿ ಜಿಲ್ಲೆಯ ವಟಗಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಾಗೂ ಕವಿತಾಳ ಬಾಲಕರ ಸರ್ಕಾರಿ ಪ್ರೌಢಶಾಲೆ ವ್ಯಾಸಂಗ ಮಾಡಿ.ರಾಯಚೂರುನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ. ಡಿಪ್ಲೊಮಾ ಕೋರ್ಸ್ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರುನ ಎಂ ಎಸ್ ರಾಮಯ್ಯ ಕಾಲೇಜಿನಲ್ಲಿ ಬಿ ಇ ಮೆಕ್ಯಾನಿಕ್ ಪದವಿ ಜೊತೆಗೆ ಬೆಂಗಳೂರುನ ಎಂ.ಟೆಕ್ ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ.
ಮಾನ್ಯೇತಾನೇ ನಡೆದ ಚಂದ್ರಯಾನ-3 ಯಶಸ್ವಿ ಹಾದಿಯಲ್ಲಿರುವ ಇಡೀ ದೇಶವೇ ಭಾರತದ ಕಡೆಗೆ ಗಮನ ಸೆಳೆದಿದೆ. ಭಾರತೀಯರು ಹೆಮ್ಮೆ ಪಡುವಂತ ವಿಷಯ. ಅಂತಹ ಇಸ್ರೋದದಲ್ಲಿ ನಮ್ಮ ಪುತ್ರ ಕೆಲಸ ಮಾಡುತ್ತಿರುವುದು ನಮಗೆಲ್ಲಾ ಸಂತೋಷದ ಸಂಗತಿ ಇಡೀ ದೇಶವೇ ಹೆಮ್ಮೆ ಪಡುವಂತದ್ದು.ಎಂದು ಸುರೇಶ್ ರೆಡ್ಡಿ ಅವರು ತಂದೆ ಬಸವರಾಜ ಹೊನ್ನಳಿ ಎಲ್ಲರೂ ಜೊತೆಗೆ ಖುಷಿ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ರೆಡ್ಡಿ ಅವರು ಊರಿನವರಾದ. ಸಿಂಧನೂರು ಶ್ರೀ ವೆಂಕಟೇಶ್ವರ ಪ್ರೌಢಶಾಲೆಯ ಶಾಲೆಯ ನಿವೃತ್ತಿ ಶಿಕ್ಷಕರಾದ ವೆಂಕನಗೌಡ ಅವರು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ.ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅತೀ ಉನ್ನತ ಸ್ಥಾನವನ್ನು ಪಡೆದು ದೇಶಕ್ಕೆ ಒಳ್ಳೆಯ ಗೌರವ ತಂದಿರುವ ಹೆಚ್ಚಾಗಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು. ಉದಾಹರಣೆ ಸುರೇಶ್ ರೆಡ್ಡಿ ಅವರೇ ಕಾರಣ. ಎಂದು ಹೇಳಿದರು ನಂತರ ಅವರಿಗೆ ಅಭಿನಂದನೆಗಳು ತಿಳಿಸುವುದರ ಜೊತೆಗೆ ಇನ್ನು ಚಂದ್ರಯಾನ 3 ಎತ್ತರದ ಉನ್ನತ ಸ್ಥಾನವನ್ನು ಪಡಿಲಿ ಎಂದು ಶುಭ ಹಾರೈಸಿದರು.

