ಉದಯವಾಹಿನಿ, ಕಲಬುರಗಿ: ತಾಲೂಕಿನ ಗರೂರ (ಬಿ) ಗ್ರಾಮದಲ್ಲಿ ಗೋವುಗಳಿಂದ ಸಿಗುವಂತಹ ಗೋಮಯ ಬಳಸಿಕೊಂಡು ಗಣೇಶ ಮೂರ್ತಿಯನ್ನು ತಯಾರಿಸಲಾಗುತ್ತಿದೆ. ಹಿಂದೆ ನಮ್ಮ ಪೂರ್ವಜರು ಸಗಣಿಯ ಉಂಡೆಯನ್ನು ಇಟ್ಟು ಅದರ ಮೇಲೆ ಗರಿಕೆಯನ್ನು ಇಟ್ಟು ಗಣಪ ಎಂದು ಪೂಜಿಸುತ್ತ ಇದ್ದರು ಹಾಗೂ ಓಡಾಡುವ ಜಾಗದಲ್ಲು ಕೂಡ ಈ ರೀತಿ ಇಡುತ್ತ ಲಿದ್ದರು ಈ ರೀತಿ ಇಡುವುದರಿಂದ ನೆಗೆಟಿವ್ ಎನರ್ಜಿ ಮನೆಯೊಳಗೆ ಪ್ರವೇಶ ಮಾಡದ ಹಾಗೆ ತಡಿಯುತ್ತದೆ ಹಾಗೂ ರೆಡಿಶನ್ ಪ್ರಬಾವ ಕೂಡ ಬಿರುವುದಿಲ್ಲ ಎಂದು ಈ ರೀತಿಯಾಗಿ ಮಾಡುತ್ತಲಿದ್ದರು.

ಆದರೆ ಇಗ ಪಿಒಪಿ ಗಣಪತಿ ವಿಗ್ರಹಗಳನ್ನು ಕೂರಿಸಿ ಪರಿಸರಕ್ಕೆ ಬಹಳಷ್ಟು ಮಾಲಿನ್ಯ ವಾಗುತ್ತಿರುವುದನ್ನು ನೋಡುತಲಿದ್ದೆವೆ ರಾಸಾಯನಿಕ ಮಿಶ್ರಿತ ಗಣೇಶಮೂರ್ತಿಯನ್ನು ನೀರಿನಲ್ಲಿ ಮುಳುಗಿಸಿ ಕೆರೆಯನ್ನು ಕಲುಷಿತಗೊಳಿಸುವುದನ್ನು ತಡೆಗಟ್ಟಲು ಹಾಗೂ ನಗರದ ಜನರಲ್ಲಿ ಪರಿಸರ ಕಾಳಜಿ ಮೂಡಿಸುವುದರೊಂದಿಗೆ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಜನರನ್ನು ಭಾಗಿಯಾಗಿಸಿಕೊಳ್ಳಲು ಮಂದಹಾಸ ಶಿಕ್ಷಣ ಮತ್ತು ಸೇವಾ ಸಂಸ್ಥೆಯು ಪರಿಸರ ಸ್ನೆ?ಹಿ ಗೋಮಯ ಗಣಪತಿ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!