
ಉದಯವಾಹಿನಿ ಮುದ್ದೇಬಿಹಾಳ ; ಪಡಿತರ ಕಾರ್ಡುಗಳಲ್ಲಿ ಹೊಸ ಸದಸ್ಯರ ಹೆಸರು ಸೇರ್ಪಡೆ,ಸೇರಿದಂತೆ ಇತರೆ ತಿದ್ದುಪಡಿಗೆ ಸರ್ಕಾರ ಅವಕಾಶ ನೀಡಿದೆ ಎಂದು ಹೇಳುತ್ತಿದ್ದರೂ ಇನ್ನೂ ಸರ್ವರ್ ಸಮಸ್ಯೆ ನೀಗದ ಕಾರಣ ಗ್ರಾಹಕರು ಮಾತ್ರ ಸೈಬರ್ ಕೇಂದ್ರಗಳಿಗೆ ಅಲೆಯುವುದು ತಪ್ಪದೆ ತತ್ತರಿಸಿ ಹೋಗುವಂತಾಗಿದೆ.ಗೃಹಲಕ್ಷ್ಮೀ ಯೋಜನೆಗೆ ಸರ್ವರ್ ಸಮಸ್ಯೆಯಿಂದ ನೋಂದಣಿ ಸಾಧ್ಯವಾಗುತ್ತಿಲ್ಲ
ಸೇವಾ ಕೇಂದ್ರದ ಸಿಬ್ಬಂದಿ ಅಸಹಾಯಕ ಸೇವಾ ಕೇಂದ್ರದ ಬಳಿ ಕಾದು ಕಾದು ಮಹಿಳೆಯರು ಹೈರಾಣಾಗಿದ್ದಾರೆ ಸರ್ಕಾರ ಮನೆ ಯಜಮಾನಿಗೆ ಖಾತೆಗೆ ಪ್ರತಿ ತಿಂಗಳು 2 ಸಾವಿರ ಹಣ ಹಾಕುವ ಗೃಹಲಕ್ಷ್ಮೇ ಯೋಜನೆ ಜಾರಿ ತಂದ ಬಳಿಕ ಹಲವು ದಶಕಗಳಿಂದ ಮೃತಪಟ್ಟಕಾರ್ಡಿನ ಕುಟುಂಬದ ಮುಖ್ಯಸ್ಥರ ಹೆಸರು ಕಾರ್ಡಿನಿಂದ ತೆಗೆಸದೆ ಹಾಗೆ ಉಳಿಸಿಕೊಂಡಿದ್ದವರು. ಈಗ ಒಮ್ಮೆಲೆ ಕಾರ್ಡಿನ ಯಜಮಾನಿಯ ಹೆಸರನ್ನು ಬದಲಾಯಿಸಲು ಇಲಾಖೆಯ ಕದ ತಟ್ಟುತ್ತಿದ್ದಾರೆ ಪಡಿತರ ಚೀಟಿ, ಆಧಾರ್ ಸಂಖ್ಯೆ, ಪತಿಯ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ಪಾಸ್ ಪುಸ್ತಕ ಮಾಹಿತಿಯೊಂದಿಗೆ ನೋಂದಣಿ ಕೇಂದ್ರಗಳಿಗೆ ಮಹಿಳೆಯರು ತೆರಳುವುದು ಸಾಮಾನ್ಯವಾಗಿದೆ. ಆದರೆ, ಸರ್ವರ್ ಸಮಸ್ಯೆಯಿಂದ ಕೆಲಸ ನೋಂದಣಿ ಆಗುತ್ತಿಲ್ಲ. ಸರ್ವರ್ ಸಮಸ್ಯೆಯಿಂದ ಒಂದೇ ಒಂದು ಕಾರ್ಡಿನಲ್ಲಿ ತಿದ್ದುಪಡಿ ಮಾಡಿಸಲು ಸಾಧ್ಯವಾಗಿಲ್ಲ, ನಿತ್ಯ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕೈಯಲ್ಲಿ ಕಾರ್ಡುಗಳನ್ನು ಹಿಡಿದುಕೊಂಡು ಸೈಬರ್ ಕೇಂದ್ರ, ಗ್ರಾಮ ಒನ್ ಹಾಗೂ ಸೇವಾ ಕೇಂದ್ರಗಳತ್ತ ಸಾಗಿದರೂ ಸರ್ವರ್ ಇಲ್ಲದೆ ಇಲಾಖೆ ವಿರುದ್ದ ಕಿಡಿಕಾರಿಕೊಂಡು ವಾಪಸ್ ಹೋಗುವಂತಾಗಿದೆ. ಸರ್ಕಾರ ಅರ್ಹರು ಗೃಹಲಕ್ಷ್ಮೀ ಯೋಜನೆಯಿಂದ ವಂಚಿತರಾಗಬಾರದೆಂದು ಕಾರ್ಡುಗಳಲ್ಲಿ ತಿದ್ದುಪಡಿಸಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳುತ್ತಿದೆ. ಮತ್ತೊಂದು ಕಡೆ ನೆಟ್ಟಿಗೆ ಸರ್ವರ್ ಕಲ್ಪಿಸದೆ ಇರುವುದರಿಂದ ಅನೇಕ ಅರ್ಹ ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಯಿಂದ ದೂರ ಉಳಿಯುವಂತಾಗಿದೆ.ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ಮತ್ತು ಸರಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರು ಆಗ್ರಹ ಪಡಿಸುತ್ತಿದ್ದಾರೆ
