
ಉದಯವಾಹಿನಿ, ನವದೆಹಲಿ: ಗ್ರಾಹಕನೋರ್ವ ತನ್ನ ವೈಯಕ್ತಿಕ ಸಾಲವನ್ನು (ಪರ್ಸನಲ್ ಲೋನ್) ಸಂಪೂರ್ಣವಾಗಿ ಚುಕ್ತಾಗೊಳಿಸಿದ ೩೦ ದಿನಗಳೊಳಗೆ ಆತನ ಎಲ್ಲಾ ಮೂಲ ಚರ ಮತ್ತು ಸ್ಥಿರ ಆಸ್ತಿ ದಾಖಲೆಗಳನ್ನು ಮರಳಿ ನೀಡಬೇಕೆಂದು ಆರ್‌ಬಿಐ ಕಡ್ಡಾಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಬ್ಯಾಂಕುಗಳು, ಎನ್‌ಬಿಎಫ್‌ಸಿಗಳು, (ಎಚ್‌ಎಫ್‌ಸಿಗಳು ಸೇರಿದಂತೆ), ಎಆರ್‌ಸಿಗಳು, ಎಲ್‌ಎಬಿಗಳು ಮತ್ತು ಸಹಕಾರಿ ಬ್ಯಾಂಕುಗಳು ಸೇರಿದಂತೆ ನಿಯಂತ್ರಿತ ಘಟಕಗಳು ವೈಯಕ್ತಿಕ ಸಾಲಗಳ ಸಂಪೂರ್ಣ ಮರುಪಾವತಿ ಅಥವಾ ಇತ್ಯರ್ಥದ ನಂತರ ೩೦ ದಿನಗಳಲ್ಲಿ ಎಲ್ಲಾ ಮೂಲ ಚರ ಮತ್ತು ಸ್ಥಿರ ಆಸ್ತಿ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಇಂದು ನಿರ್ದೇಶನ ನೀಡಿದೆ.
