
ಉದಯವಾಹಿನಿ ದೇವರಹಿಪ್ಪರಗಿ: ತಾಲೂಕಿನ ಕಡಕೋಳ ಗ್ರಾಮದಲ್ಲಿ 12ನೇ ಶತಮಾನದಲ್ಲಿ ಅವತರಿಸಿದ ಮುಗ್ಧ ಸಂಗಮೇಶ್ವರ ರ ಪುರಾಣವು ಶ್ರಾವಣ ಮಾಸದ ಅಂಗವಾಗಿ ದಿನಾಂಕ 21-08- 2023 ರಂದು ಸೋಮವಾರ ನೂತನವಾಗಿ ನಿರ್ಮಾಣವಾದ ಶ್ರೀ ಗುರು ಮುಗ್ಧ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ರಾಜಗುರು ವೆ.ಮೂ. ಮಹಾಲಿಂಗ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಶ್ರೀ ಗುರುನಾಥ ಶಾಸ್ತ್ರಿಗಳ ದಿವ್ಯ ವಾಣಿಯೊಂದಿಗೆ ಪ್ರಾರಂಭವಾಗಿ ಸಂಗಮೇಶ್ವರರು ಕಲ್ಯಾಣದಿಂದ ಗಡವಂತಿ ಮಾರ್ಗವಾಗಿ ಕಡಕೋಳ ಗ್ರಾಮಕ್ಕೆ ದಿನಾಂಕ 11-09-2023 ಸೋಮವಾರದಂದು ಕಡಕೋಳ ಗ್ರಾಮಕ್ಕೆ ಆಗಮಿಸಿದಾಗ ತ್ರಿಮೂರ್ತಿ ಸ್ವಾಮೀಜಿಗಳಾದ ಶ್ರೀ ಕ್ಷ.ಬ್ರ.ಅಭಿನವ ಮೂರ್ತಿ ರುದ್ರಮುನಿ ಶಿವಾಚಾರ್ಯರು ಯಂಕಂಚಿ ಹಾಗೂ ಶ್ರೀ ಮ.ನಿ. ಪ್ರ.ಮಡಿವಾಳೇಶ್ವರ ಮಹಾಸ್ವಾಮಿಗಳು ಕೊಕಟನೂರ ಹಾಗೂ ಕಡಕೋಳ ಗ್ರಾಮದ ಶ್ರೀಗಳಾದ ರಾಜ್ಯ ಗುರು ವೆ.ಮೂ. ಮಹಾಲಿಂಗ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಊರಿನ ಪ್ರಮುಖ ಬೀದಿಯಲ್ಲಿ ಭವ್ಯ ಮೆರವಣಿಗೆ ಮುಖಾಂತರ ಶ್ರೀ ಸಂಗಮೇಶ್ವರರನ್ನು ಬರಮಾಡಿಕೊಳ್ಳಲಾಯಿತು ತದನಂತರ ಶ್ರೀಗಳು ಆಶೀರ್ವಚನ ನೀಡಿ ಕಡಕೋಳ ಗ್ರಾಮದ ಭಕ್ತರನ್ನು ಕೊಂಡಾಡಿದರು, ಅದೇ ರೀತಿ ದಿನಾಂಕ 17-09-2023 ರವಿವಾರ ದಂದು ಇಡೀ ರಾತ್ರಿ ಭಜನಾ ಕಾರ್ಯಕ್ರಮ ಕಡಕೋಳ ಶ್ರೀ ಗುರು ಮುಗ್ಧ ಸಂಗಮೇಶ್ವರ ಭಜನಾ ಮಂಡಳಿ ಹಾಗೂ ಸುಪ್ರಸಿದ್ಧ ಭಜನಾ ತಂಡದವರಿಂದ ಕಾರ್ಯಕ್ರಮ ನಡೆಯುವುದು, ದಿನಾಂಕ 18-09-2023 ಸೋಮವಾರದಂದು ಮುಂಜಾನೆ 10ಗಂಟೆಗೆ ಪಲ್ಲಕ್ಕಿ ಉತ್ಸವದೊಂದಿಗೆ ಪ್ರಮುಖ ಬೀದಿಯಲ್ಲಿ ವಾದ್ಯ ವೃಂದದೊಂದಿಗೆ ಭವ್ಯ ಮೆರವಣಿಗೆಯ ಮುಖಾಂತರ ದೇವಸ್ಥಾನಕ್ಕೆ ತಲುಪಿ ಶ್ರೀಮುಗ್ದ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 12 ಗಂಟೆಗೆ ಧರ್ಮಸಭೆ ಯನ್ನು ಶ್ರೀ ಪರಮಪೂಜ್ಯ ಅಡವಿ ಲಿಂಗ ಮಹಾರಾಜರು ಸುಕ್ಷೇತ್ರ ವೀರಗೋಟ, ಶ್ರೀ ರಾಜಗುರು ವೆ. ಮೂ. ಮಹಾಲಿಂಗ ಸ್ವಾಮಿಗಳು ಕಡಕೋಳ,ಶ್ರೀ ಮ. ಘ. ಚ. ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ನಾಗಠಾಣ, ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಿರಕ್ತಮಠ ಪಡೆಕನೂರ, ಶ್ರೀ ಷ.ಬ್ರ. ಅಭಿನವ ರುದ್ರಮುನಿ ಶಿವಾಚಾರ್ಯರು ಯಂಕಂಚಿ, ಶ್ರೀ ಮ.ಘ.ಚ.ಡಾ. ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾಗಣಗೆರಿ, ಶ್ರೀ ಮ.ನಿ.ಪ್ರ.ಮಡಿವಾಳೇಶ್ವರ ಮಹಾಸ್ವಾಮಿಗಳು ಗದ್ದಗಿಮಠ ಕೊಕಟನೂರ, ಶ್ರೀ ಪರಮಪೂಜ್ಯ ಕೇದಾರಲಿಂಗ ದೇವರು ಗುರುಮಾಂತೇಶ್ವರ ಗುರುಮಠ ಯಾಳವಾರ, ಶ್ರೀ ವೇದಮೂರ್ತಿ ಬಸಲಿಂಗಯ್ಯ ಸ್ವಾಮಿಗಳು ಗದ್ದಗಿಮಠ ಕೊಂಡಗೂಳಿ, ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಪುರಾಣ ಮಹಾಮಂಗಲವಾಗುವುದು, ಸಮಸ್ತ ಭಕ್ತಾದಿಗಳು ಆಗಮಿಸಿ ಗುರುಮುಗ್ಧ ಸಂಗಮೇಶ್ವರ ರ ಕೃಪೆಗೆ ಪಾತ್ರರಾಗಬೇಕೆಂದು ಸಮಸ್ತ ಕಡಕೋಳ ಗ್ರಾಮದ ಭಕ್ತಾದಿಗಳಿಂದ ಹಾರ್ದಿಕವಾದ ಸ್ವಾಗತ ಕೋರಿದ್ದಾರೆ.
