
ಉದಯವಾಹಿನಿ ರಾಮನಗರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸಾಮೂಹಿಕ ಶ್ರೀ ರಾಮ ತಾರಕ ಪೂಜಾ ಸಮಿತಿ, ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಜಾಲಮಂಗಲ, ಕ್ಯಾಶಪುರ, ಬಿಳಗುಂಬ, ಕುರುಬರಹಳ್ಳಿ, ವಡ್ಡರದೊಡ್ಡಿ, ತಡಿಕವಾಗಿಲು, ದೊಡ್ಡಗಂಗವಾಡಿ, ಶ್ಯಾನುಭೋಗನಹಳ್ಳಿ ವತಿಯಿಂದ ಕ್ಯಾಶಾಪುರ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಲೋಕಕಲ್ಯಾಣಕ್ಕಾಗಿ ಸಾಮೂಹಿಕ ಶ್ರೀ ರಾಮ ತಾರಕ ಪೂಜೆ ಕಾರ್ಯಕ್ರಮ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಜಿಲ್ಲಾ ನಿರ್ದೇಶಕರು ಜಯಕರ ಶೆಟ್ಟಿ ಭಾಗವಹಿಸಿ ಮಾಹಿತಿ ಮಾರ್ಗದರ್ಶನ ನೀಡಿದರು. ಯೋಜನೆಯ ವಿವಿಧ ಅನುದಾನ ಕಾರ್ಯಕ್ರಮಗಳ ಬಗ್ಗೆ ಮಾಹಿತಿಗಳು, ಸ್ವಸಹಾಯ ಸಂಘದ ಉದ್ದೇಶಗಳು ಅದರ ಪ್ರಯೋಜನಗಳ ಬಗ್ಗೆ ವಿವರಿಸಿದರು.ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ಆರ್ ಕೆ ಸತೀಶ್ ಯೋಗ ಶಿಕ್ಷಕರು ರಾಮನಗರ ನಡೆಸಿಕೊಟ್ಟರು. ದೇವಸ್ಥಾನಗಳಿಗೆ ಧರ್ಮಸ್ಥಳದಿಂದ ಕಸದ ಬುಟ್ಟಿ ಹಸ್ತಾಂತರ ನಡೆಯಿತು.ವೇದಿಕೆಯಲ್ಲಿ ಯೋಜನಾಧಿಕಾರಿ ಮುರಳೀಧರ, ಎ. ಈರಲಿಣ್ಗಯ್ಯ, ಕ್ಯಾಶಪುರ,ಸಿದ್ದರಾಮೇ ಗೌಡ, ಕ್ಯಾಶಪುರ,ಸಂತೋಷ್ ಕುಮಾರ್, ಕ್ಯಾಶಾಪುರ, ಬೈರೇಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂಜಾ ಕಾರ್ಯಕ್ರಮದಲ್ಲಿ ಸಾಮೂಹಿಕ ರಾಮ ನಾಮ ಜಪ ಮಾಡಲಾಯಿತು. ಕಾರ್ಯಕ್ರಮ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ಜಾಲಮಂಗಲ ವಲಯ ಮೇಲ್ವಿಚಾರಕ ಸುಧೀರ್ ಕಾರ್ಯಕ್ರಮ ನಿರೂಪಿಸಿದರು. ಸೇವಾಪ್ರತಿನಿಧಿಗಳು, ಒಕ್ಕೂಟ ಪದಾಧಿಕಾರಿಗಳು ಹಾಜರಿದ್ದರು.
