ಉದಯವಾಹಿನಿ ಅಫಜಲಪುರ : ಗುರು ಎಂದರೆ ಜ್ಞಾನ ಗುರು ಎಂದರೆ ಬೆಳಕು ಜೀವನ,ರೂಪಿಸುವ ಶಿಲ್ಪಿ, ಭವ್ಯ ರಾಷ್ಟ್ರದ ನಿರ್ಮಾಣ ಶಿಕ್ಷಕರ ಕೈಯಲ್ಲಿದೆ ಎಂದು ಮಣ್ಣೂರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ  ಶಾಂತರಸ ಹೊಸಮನಿ ಹೇಳಿದರುಅವರು‌ ತಾಲೂಕಿನ ಮಣ್ಣೂರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ  ಮಾತನಾಡಿ ಶಿಲ್ಪಿ ತನ್ನ ಕೈಚಳಕದಿಂದ ಕಲ್ಲನ್ನು ಮೂರ್ತಿ ಮಾಡುವ ರೀತಿ ಶಿಕ್ಷಕ ಮಕ್ಕಳೆಂಬ ಶಿಲೆಯನ್ನು ಕೆತ್ತಿ ಸುಂದರ ಮೂರ್ತಿಯನ್ನಾಗಿ ಮಾಡಬೇಕು ಶಿ ಎಂದರೆ ಶಿಸ್ತು ಕ್ಷ ಎಂದರೆ ಕ್ಷಮೆ ಕ ಎಂದರೆ ಕರುಣೆ. ಈ ಪದಗಳು ಸಮ ಸಮವಾಗಿ ಅರ್ಥ ಒಂದೇ ಆಗಿದೆ.ಮಗುವಿಗೆ ತಾಯಿ ಮೊದಲ ಗುರು ಆದರೆ ಶಾಲೆಯಲ್ಲಿ ಶಿಕ್ಷಕರೆ ಮೊದಲ ಗುರುಗಳು.ವಿದ್ಯಾರ್ಥಿಗಳ ಬದುಕಿನ ಹಿಂದೆ ಗುರುವಿನ ಶ್ರಮವಿದೆ.ಗುರುಗಳ ಮಹತ್ವ ವಿದ್ಯಾರ್ಥಿಗಳಿಗೆ ಅರ್ಥವಾಗಬೇಕು ಶಿಸ್ತು, ವಿದ್ಯೆ, ವಿನಯ ಇವುಗಳು ಇಂದಿನ ವಿದ್ಯಾರ್ಥಿಗಳಲ್ಲಿ ಇರಬೇಕಾದ ಅತ್ಯಂತ ಮೌಲ್ಯಯುತ  ಗುಣಗಳಾಗಿವೆ.ಎಂದು ಹೇಳಿದರು.ಗ್ರಾ ಪಂ ಮಾಜಿ ಉಪಾಧ್ಯಕ್ಷ ಗಡ್ಡೆಪ್ಪ ಬಸ್ಸಿನಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾ ಪಂ ಕಾರ್ಯದರ್ಶಿ ನಾರಾಯಣ ಚವ್ಹಾಣ ಪತ್ರಕರ್ತ ಶಿವಲಿಂಗೇಶ್ವರ ಜಾಲವಾದಿ ರಾಜಶೇಖರ ಬಜಂತ್ರಿ ಗೌರಿಶಂಕರ ಬರಗಾಲೆ ಉಪನ್ಯಾಸಕರಾದ ಜಟ್ಟೆಪ್ಪ ಪೂಜಾರಿ ರಮಜಾನ ಅಶ್ವಿನಿ ಕುಮಾರ ನಾಗವೇಣಿ ಸೇರಿದಂತೆ ವಿದ್ಯಾರ್ಥಿಗಳಿದ್ದರು. ವಿದ್ಯಾರ್ಥಿ ಪ್ರತಿಭಾ ಬಡಿಗೇರ ನಿರೂಪಿಸಿ ಸ್ವಾಗತಿಸಿದರು.ಭಾಗ್ಯಶ್ರೀ ಪವಾರ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!