ಉದಯವಾಹಿನಿ ಕೆ ಆರ್ ಪೇಟೆ: ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆ ಗ್ರಾಮೀಣ ಜನರ ಬದುಕನ್ನು ಹಸನು ಮಾಡುವ ಎಲ್ಲಾ ರೀತಿಯ ಕಾರ್ಯಚಟುವಟಿಕೆಗಳನ್ನು ಧರ್ಮಾಧಿಕಾರಿಗಳ ಮಾರ್ಗದರ್ಶನದಲ್ಲಿ ಮಾಡುತ್ತಾ ಬರುತ್ತಿದೆ ಎಂದು ಮೈಸೂರು ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ್ ನೆಲ್ಲಿತ್ತಾಯ ಅಭಿಪ್ರಾಯಪಟ್ಟರು.ಅವರು ಪಟ್ಟಣದ ಹೊಸಹೊಳಲು ರಸ್ತೆಯ ಎಸ್‌ಎಲ್‌ಎನ್ ಸಮುದಾಯ ಭವನದಲ್ಲಿ ತಾಲೂಕಿನ ಬೀದಿಬದಿ ವ್ಯಾಪಾರಿಗಳ ಸಂಘ ಉದ್ಘಾಟನೆ ಮತ್ತು ವಿಕಲ ಚೇತನರಿಗೆ ಸಲಕರಣೆ ವಿತರಣೆ ಹಾಗೂ ಸ್ವ ಉದ್ಯೋಗದಡಿ ಟೈಲರ್ ಮಿಷನ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಪೂಜ್ಯ ಧರ್ಮಾಧಿಕಾರಿಗಳ ಮಾರ್ಗದರ್ಶನದಂತೆ ಸಮಾಝದ ಬಡಜನರ, ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿರುವ ಕೆಲವು ಕಾರ್ಯಕ್ರಮಗಳು ರಾಜ್ಯ ಮಟ್ಟದಲ್ಲಿ ಜನಮನ್ನಣೆ ಪಡೆದಿವೆ. ಗ್ರಾಮಾಭಿವೃದ್ದಿ ಯೋಜನೆಗಳು ರಾಜ್ಯದ ಎಲ್ಲಾ ಹಳ್ಳಿಗಳಿಗೂ ತಲುಪಿವೆ. ಮುಂದುವರಿದು ಬೀದಿಬದಿ ವ್ಯಾಪಾರಿಗಳು ಉತ್ತಮ ಸಂಘವನ್ನು ನಿರ್ವಹಣೆ ಮಾಡಿ, ಉತ್ತಮ ಲಾಭ ಗಳಿಸಬೇಕು ಎಂದು ಎಲ್ಲರಿಗೂ ಶುಭ ಕೋರಿದರು.ತಾಲೂಕು ದಂಡಾಧಿಕಾರಿ ಹಾಗೂ ತಹಸೀಲ್ದಾರ್ ನಿಸರ್ಗಪ್ರಿಯ ಮಾತನಾಡಿ ಕ್ಷೇತ್ರದ ಹಲವಾರು ಕಾರ್ಯಕ್ರಮಗಳು ತೀರಾ ಸಂಕಷ್ಟದಲ್ಲಿರುವ ಫಲಾನುಭವಿಗಳನ್ನು ಗುರುತಿಸಿ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿರುವುದು ಸಂತಸ ತಂದಿದ್ದು ಕಾರ್ಯಕ್ರಮ ಸದ್ಭಳಕೆ ಆಗುವಂತೆ ತಿಳಿಸಿದರು.ಪುರಸಭೆ ಉಪಾಧ್ಯಕ್ಷೆ ಗಾಯಿತ್ರಮ್ಮ, ಜಿಲ್ಲಾ ನಿರ್ದೇಶಕರು ಕೇಶವ ದೇವಾಂಗ ಹಾಗೂ ಟೈಲರ್ ಸಂಘದ ಅಧ್ಯಕ್ಷ ಮಂಜುನಾಥ್ ಹಾಗೂ ಮಹಿಳಾ ಸಂಘದ ಅಧ್ಯಕ್ಷ ಮಂಜುಳಾ, ಹಾಗೂ ಸಮುದಾಯ ಭವನದ ಮಾಲೀಕ ಉದಯಕುಮಾರ್, ಯೋಜನಾಧಿಕಾರಿ ಮಮತಾಶೆಟ್ಟಿ, ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಹಾಜರಿದ್ದರು.
