
ಉದಯವಾಹಿನಿ ಸಿಂಧನೂರು: ಸೆ.18 ರಂದು ಗಣೇಶೋತ್ಸವ ಹಾಗೂ ಸೆ.28 ರಂದು ಈದಾ ಮಿಲಾದ್ ಹಬ್ಬವನ್ನು ಪರಿಸರ ಮಾಲಿನ್ಯಕ್ಕೆ ಮತ್ತು ಪಬ್ಲಿಕ್ ಜನರಿಗೆ ಸಮಸ್ಯೆಯಾಗದಂತೆ.
ಎಲ್ಲರ ಸ್ನೇಹದೊಂದಿಗೆ ಒಳ್ಳೆಯ ಬಾಂಧವ್ಯದಿಂದ ಹಬ್ಬವನ್ನು ಆಚರಿಸಬೇಕು. ಸುಪ್ರೀಂಕೋರ್ಟ್ ಆದೇಶದಂತೆ ಯಾರು ಡಿಜೆ ಬಳಸುವಂತಿಲ್ಲ. ಮತ್ತು ಒಂದು ವೇಳೆ ತಾವುಗಳು ಕುಡಿದು ನಿಷೇಧದಲ್ಲಿ ಕಾನೂನು ಉಲ್ಲಂಘಿಸಿದರೆ ತಮ್ಮ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಶಾಂತಿ ಸಭೆಯಲ್ಲಿ ಖಡಕ್ ಎಚ್ಚರಿಕೆ ಸಂದೇಶವನ್ನು ನೀಡಿದರು.ನಗರದ ಶಹರ ಪೊಲೀಸ್ ಠಾಣೆಯ ಆವರಣದಲ್ಲಿ ನಿನ್ನೆ ಸಂಜೆ ನಡೆದ ಗಣೇಶೋತ್ಸವ ಹಾಗೂ ಈದಾ ಮಿಲಾದ್ ಹಬ್ಬವನ್ನು ಕುರಿತು ವಿವಿಧ ಸಂಘ ಸಂಸ್ಥೆಗಳ ಹಾಗೂ ರಾಜಕೀಯ ಮುಖಂಡರು ಜೊತೆಗೆ ಶಾಂತಿ ಸಭೆಯನ್ನು ಹೆಮ್ಮೆ ಕೊಳ್ಳಲಾಗುತ್ತು.
ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಯಾವುದೇ ಧರ್ಮದ ಹಬ್ಬಗಳು ಎಲ್ಲರೂ ಒಂದೇ ಎಂಬ ಭಾವೈಕ್ಯತೆ ಸಂಕೇತವಾದ ಹಬ್ಬಗಳು ಯಾವ ಧರ್ಮಗಳ ಸಹ ಕೆಡುಕನ್ನು ಬಯಸುವುದಿಲ್ಲ ಎಂದು ಹೇಳಿದರು.ಮಾನವನು ನಿಸರ್ಗದ ಮಡಿಲಲ್ಲಿರುವ ಒಂದು ಜೀವ ಮತ್ತೊಂದು ಜೀವಕ್ಕೆ ತೊಂದರೆಗಳು ಕೊಡುವಂತಹ ಘಟನೆಗಳು ನಡೆಯದಂತೆ. ಮಾನವನ ಮೌಲ್ಯಗಳನ್ನು ಎತ್ತಿ ಕಟ್ಟುವ ಹುಬ್ಬುಗಳು ಆಗಬೇಕು.ಮತ್ತು ಎಲ್ಲರೂ ಒಟ್ಟಾಗಿ ಸೇರಿ ಶಾಂತಿ ಸೌಹಾರ್ದತೆ ಸಾಮರಸ್ಯದಿಂದ ಹಬ್ಬವನ್ನು ಆಚರಿಸುವ ಮೂಲಕ ಬದುಕನ್ನು ಕಟ್ಟಿಕೊಳ್ಳಲು ಅವಕಾಶವನ್ನು ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಪೌರಾಯುಕ್ತರು ಗಣೇಶನ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಮಾಡುವ ಸಮಯದಲ್ಲಿ ಸಾರ್ವಜನಿಕರು ತೊಂದರೆಯಾಗದಂತೆ ನೋಡಿಕೊಳ್ಳಿ. ನಗರದ ಹಿರೇಹಳ್ಳದಲ್ಲಿ ಸುಮಾರು 10-12 ಪಿಟ್ ಅಡಿ ಗುಂಡಿಗಳನ್ನು ಎರಡು ತೆಗೆದದ್ದು.ಅದರ ಮೂಲಕ ಗಣೇಶನ ವಿಸರ್ಜನೆ ಮಾಡುಬೇಕು.ರಸ್ತೆ ಬದಿಯಲ್ಲಿ ಲೈಟ್ ವ್ಯವಸ್ಥೆ ಮಾಡಲಾಗಿದೆ. ಯಾರು ಸಹ ಪಿಓಪಿ ಯಿಂದ ಕೊಡಿದ ಗಣೇಶನನ್ನು ಕುಡಿಸುವಂತೆ ಇಲ್ಲ. ಮಣ್ಣಿನ ಗಣೇಶ ವಿಗ್ರಹವನ್ನು ಕುಡಿಸಬೇಕು ಒಂದು ವೇಳೆ ಪಿಓಪಿ ಗಣೇಶ ವಿಗ್ರಹ ಕಂಡು ಬಂದರೆ ತಕ್ಷಣ ಮೂರ್ತಿಯನ್ನು ವಶಪಡಿಸಿಕೊಳ್ಳುತ್ತೇವೆ. ಅದಕ್ಕಾಗಿ ನಗರ ಸಭೆಯಿಂದ ನಾಲ್ಕು ತುಂಡುಗಳನ್ನು ರಚಿಸಲಾಗಿದೆ. ಪ್ಲಾಸ್ಟಿಕ್ ಧ್ವಜ ಬ್ಯಾನರ್ ಕಟೌಟ್ ಗಳ ಇಸ್ಪೀಟ್ ಬೆಟ್ಟಿಂಗ್. ನಡೆದರೆ ಕ್ರಮ ಜರುಗಿಸಲಾಗುತ್ತದೆ.
ತಾಲ್ಲೂಕು ತಹಶೀಲ್ದಾರ್ ಮಾತನಾಡಿ. ನಗರ ಸಭೆ ವಿದ್ಯುತ್ ಇಲಾಖೆ ಮತ್ತು ಪೋಲಿಸ್ ಇಲಾಖೆ ಪರವಾನಗಿ ಪಡೆದು ಬೆಳಿಗ್ಗೆ 6 ರಿಂದ. ರಾತ್ರಿ ವೇಳೆ ಗೆ ದ್ವನಿ ವರ್ಧಕ ಬೆಳೆಸಬೇಕು. ಅಶ್ಲೀಲ. ಇತರ
ಕೋಮುಗಲಭೆಗೆ ಸಂಬಂಧಿಸಿದ ಹಾಡುಗಳನ್ನು ಹಾಕುವಂತಿಲ್ಲ ದೇಣಿಗೆ ಸಂಗ್ರಹ ಮಾಡಬಾರದು.ಅತೀ ಡಿಜೆ ಬಳಸುವಂತಿಲ್ಲ ಕಾನೂನು ಸುವ್ಯವಸ್ಥೆ ಮೆರವಣಿಗೆ ಮಾಡಬೇಕು.ರಾತ್ರಿ 10 ಗುಂಟೆ ಒಳಗಾಗಿ ಗಣೇಶ ವಿಗ್ರಹ ವಿಸರ್ಜನೆ ಮಾಡುಬೇಕು ಎಂದು ಈ ಶಾಂತಿ ಸಭೆಯಲ್ಲಿ ಸಂಘ ಸಂಸ್ಥೆಗಳು ಅಧ್ಯಕ್ಷರು ಮತ್ತು ಮತ್ತು ಅಧಿಕಾರಿಗಳು ಮಾತನಾಡಿದರು.
ಈ ಸಂದರ್ಭದಲ್ಲಿ ಎಚ ವೀರಭದ್ರಪ್ಪ ನಗರ ಸಭೆ ಸದಸ್ಯರು ಎಂ ಡಿ ನದೀಮ್ ಮುಲ್ಲಾ. ಚಾಂದ್ ಪಾಷ. ರಾಜ. ಮತ್ತು ಅಗ್ನಿ ಶಾಮಕ ಇಲಾಖೆ ಮತ್ತು ಜೆಸ್ಕಾಂ ವಿಭಾಗ ಅಧಿಕಾರಿ ಮಲ್ಲಿಕಾರ್ಜುನ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಪೋಲಿಸ್ ಇಲಾಖೆ ಅಧಿಕಾರಿಗಳ ಸಿಬ್ಬಂದಿ ವರ್ಗ ಸೇರಿದಂತೆ. ಇತರರು ಉಪಸ್ಥಿತರಿದ್ದರು.
