ಉದಯವಾಹಿನಿ, ದೇವದುರ್ಗ : ಸರಕಾರದಿಂದ ಗ್ರಾಮ ಪಂಚಾಯಿತಿಗಳಿಗೆ ಸಾಕಷ್ಟು ಅನುದಾನ ಬರುತ್ತಿದೆ.ಆದರೆ ಸರಿಯಾದ ರೀತಿಯಲ್ಲಿ ಬಳಕೆ ಆಗುತ್ತಿಲ್ಲ. ಇದರಿಂದ ಗ್ರಾಮಗಳು ಸುದಾರಣೆಯಾಗುತ್ತಿಲ್ಲ.ಹೌದು ಇಂದು ನಾವು ಹೇಳುತ್ತಿರುವ ಸುದ್ದಿ ಎಲ್ಲಿದು ಅಂತ  ಅಂತೀರಾ ಇದು ರಾಯಚೂರು ಜಿಲ್ಲೆಯ  ದೇವದುರ್ಗ ತಾಲ್ಲೂಕಿನ ರಾಮದುರ್ಗ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಕಾಕರಗಲ್ ಗ್ರಾಮದ ಜನತಾ ಕಾಲೋನಿಯಲ್ಲಿ  ಚರಂಡಿ ನೀರು ರಸ್ತೆಗೆ ಹರಿಯುತ್ತಿದ್ದು,  ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ 3-4 ತಿಂಗಳಗಳಿಂದ ಗಮನಕ್ಕೆ ತಂದರು ಮತ್ತು ಪಿಡಿಓ ರನ್ನು ಕರೆಯಿಸಿ ಸ್ಥಳ ಪರಿಶೀಲನೆ ಮಾಡಿಸಿದರು ಕೂಡ ತನ್ನ ಜವಾಬ್ದಾರಿಯನ್ನು ಮರೆತು ಕುಳಿತಿದ್ದಾರೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಿದರು ಅದರ ಬಗ್ಗೆ ಗಮನಹರಿಸುತ್ತಿಲ್ಲ, ನೀವೇ ವಾಸ ಮಾಡುತ್ತಿದ್ದೀರಿ ನಿಮ್ಮ ಮನೆಯ ಮುಂದೆ ಚರಂಡಿ ಹರಿಯುತ್ತಿದೆ ಅದನ್ನು ನೀವೇ ಕ್ಲೀನ್ ಮಾಡಿಸಿ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಾಕರಗಲ್ ಗ್ರಾಮಕ್ಕೆ ಲಕ್ಷ ಲಕ್ಷಗಟ್ಟಲೆ ಅನುದಾನ ಉಳ್ಳ ಕಾಮಗಾರಿಗಳನ್ನು ಗ್ರಾಮ ಸಭೆ ಮಾಡದೆ ,ಕ್ರಿಯಾ ಯೋಜನೆಯಲ್ಲಿ ಸೃಷ್ಟಿಸಿ ಅವಶ್ಯಕತೆ ಇರಲಾರದಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಿ ಅರ್ಧಂಬರ್ಧ ಕೆಲಸ ಮಾಡಿ ಭೋಗಸ್ ಬಿಲ್ ಮಾಡಿಕೊಡುತ್ತಾರೆ ಕಾಕರಗಲ್ ಗ್ರಾಮದ ಜನತಾ ಕಾಲೋನಿಯಲ್ಲಿ ಚರಂಡಿ ತುಂಬಿ ರಸ್ತೆಯ ಮೇಲೆ ನೀರು ಹರಿದು ಜನಸಾಮಾನ್ಯರು ತಿರುಗಾಡಲು ಆಗುತ್ತಿಲ್ಲ ಎಂಬುದು ಕಣ್ಣಿಗೆ ಗೋಚರಿಸಿದರು ಇದು ನಮ್ಮ ಕೆಲಸವಲ್ಲ ಎಂಬ ರೀತಿಯಲ್ಲಿ ಪಿಡಿಒರವರು ಬೇಜವಾಬ್ದಾರಿ ವರ್ತನೆ ತೋರುತ್ತಿದ್ದಾರೆ. ಜನತಾ ಕಾಲೋನಿಯಲ್ಲಿ  ಎಸ್ ಸಿ ಎಸ್ ಟಿ ಯ ಸಮುದಾಯದ ಜನರು ವಾಸ ಮಾಡುತ್ತಿರುವುದರಿಂದ ಚರಂಡಿ ಸ್ವಚ್ಛ ಮಾಡಲು ವಿಳಂಬಕ್ಕೆ ಕಾರಣವೆಂಬುದು ಮೇಲ್ನೋಟಕ್ಕೆ ಕಾಣುತ್ತದೆ, ಅಷ್ಟೇ ಅಲ್ಲದೆ ಎಸ್ ಸಿ (ಮಾದಿಗರ)ಕಾಲೋನಿಯಲ್ಲಿ ಕಲುಷಿತ ನೀರು ಕಳಿಸಲು ಚರಂಡಿ ವ್ಯವಸ್ಥೆ ಇರುವುದಿಲ್ಲ ಎಸ್ಸಿ ಕಾಲೋನಿಯಲ್ಲಿ ನೀರು ನಿಂತುಕಲುಷಿತ ವಾತಾವರಣ ಸೃಷ್ಟಿಯಾಗಿದೆ, ಈ ವಾಸನಕ್ಕೆ ವಾಸ ಮಾಡಲು ಆಗುತ್ತಿಲ್ಲ ಪಿಡಿಓ ರವರು ಈ ವಾತಾವರಣವನ್ನು ಕಣ್ಣಾರೆ ನೋಡಿದರೂ ಸಹ ಸುಮ್ಮನೆ ಕುಳಿತಿರುವುದು ಸೋಜಿಗದ ವಿಷಯವಾಗಿದೆ. ಸಂಬಂಧಪಟ್ಟ ಮೇಲಧಿಕಾರಿಗಳು ಇದರ ಬಗ್ಗೆ ಗಮನ ಹರಿಸದೆ ಹೋದರೆ ಕಲುಷಿತ ವಾತಾವರಣದಿಂದ  ಮುಂದೆ  ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳಿಗೆ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.
ಹಲವು ಬಾರಿ ದೂರವಾಣಿ ಕರೆ ಮಾಡಿದರು ಕರೆ  ಸ್ವೀಕರಿಸದ ನಾಲಾಯಕ್ ಪಿಡಿಓ  ಕಿರಣ್ ಬಾಬು…
ನಮ್ಮೂರಿನ ಜನತಾ ಕಾಲೋನಿಯ ಚರಂಡಿಯ ಹೂಳೆತ್ತುವುದು ಮತ್ತು ಎಸ್ಸಿ ಕಾಲೋನಿಯಲ್ಲಿ ಚರಂಡಿ ನಿರ್ಮಾಣ ಮಾಡುವ ಕುರಿತು ಪಿಡಿಓ ರವರಿಗೆ ಸುಮಾರು ಮೂರು – ನಾಲ್ಕು ತಿಂಗಳುಗಳಿಂದ ಈ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವಂತೆ ಒತ್ತಾಯಿಸಿದರೂ ಇತ್ತ ಚೂರು ಗಮನ ಕೊಡುತ್ತಿಲ್ಲ ಸಂಬಂಧಪಟ್ಟ ಮೇಲಾಧಿಕಾರಿಗಳು ಗಮನ ಹರಿಸಿ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವಂತೆ ಒತ್ತಾಯಿಸುತ್ತೇನೆ, ಒಂದು ವೇಳೆ ನಿರ್ಲಕ್ಷ್ಯ ತೋರಿದಲ್ಲಿ ತಾಲೂಕು ಪಂಚಾಯತ್ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ..

Leave a Reply

Your email address will not be published. Required fields are marked *

error: Content is protected !!