
ಉದಯವಾಹಿನಿ,ಚಿಂಚೋಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ವಿಮೆ ಹಣ ಬಿಡುಗಡೆ ಮಾಡಬೇಕು,ರೈತರ ಸಾಲಮನ್ನಾ ಮಾಡಬೇಕು,ಕಲಬುರ್ಗಿ ಜಿಲ್ಲೆಯನ್ನು ಸಂಪೂರ್ಣ ಅತಿವೃಷ್ಟಿ ಬರಗಾಲ ಪೀಡಿತವೆಂದು ಘೋಷಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪಾ ಮಮಶೇಟ್ಟಿ ಆಗ್ರಹಿಸಿದರು. ಪಟ್ಟಣದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಜಾಥಾವನ್ನು ಪಟ್ಟಣದಲ್ಲಿ ತಹಸೀಲ್ದಾರ್ ಹಾಗೂ ಕೃಷಿ ನಿರ್ದೇಶಕರ ಮೂಲಕ ಮನವಿಪತ್ರ ಸಲ್ಲಿಸಿ ಮಾತನಾಡಿದ ಅವರು,ಕೇಂದ್ರ ಸರ್ಕಾರವು ಬಲಗಾಲ ಘೋಷಿಸಲು ಪ್ರಜಾಪ್ರಭುತ್ವದ ವ್ಯವಸ್ಥೆಯ ಮಾನದಂಡಗಳು ರೂಪಿಸಬೇಕು,ಗ್ರಾಮಗಳಲ್ಲಿ ಶುಧ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು,ತಕ್ಷಣವೇ ಬಿಪಿಎಲ್ ಎಪಿಎಲ್ ತಾರತಮ್ಯ ಮಾಡದೆ ಬರಗಾಲ ಪರಿಹಾರ ರೇಷನ್ ವಿತರಣೆಯಲ್ಲಿ ಹೆಚ್ಚುವರಿ ಆಹಾರಧಾನ್ಯ ವಿತರಿಸಿ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಕ್ರಮವಹಿಸಿ ನೋಡಲ್ ಅಧಿಕಾರಿಗಳು ನೇಮಿಸಬೇಕು,ಕೇಂದ್ರ ಸರ್ಕಾರವು ರೈತರ,ಕೃಷಿ ಕೂಲಿಕಾರರ ಗ್ರಾಮೀಣ ಮಹಿಳೆಯರ ಸಾಲಮನ್ನಾ ಹಾಗೂ ಬಡ್ಡಿ ಮನ್ನಾ ಮಾಡಿ ಎಲ್ಲಾ ರೀತಿಯ ಸಾಲ ವಸೂಲಾತಿ ನಿಷೇಧಿಸಿ ಆದೇಶ ಹೊರಡಿಸಬೇಕು,ನರೇಗಾ ಯೋಜನೆಯ ಕೆಲಸ ದಿನಗಳು 200ದಿನಕ್ಕೆ ಹೆಚ್ಚಿಸಿ ಬರಗಾಲ ಕೂಲಿಯಾಗಿ 600ರೂ.ಪಾವತಿಸಬೇಕು,ರೈತರ ಆತ್ಮಹತ್ಯೆ ತಡೆಗಟ್ಟಲು ಕ್ರಮವಹಿಸಿ,ಗ್ರಾಪಂ ಮಟ್ಟದಲ್ಲಿ ಬರಗಾಲ ಪರಿಹಾರ ಕ್ರಮಗಳನ್ನು ಯೋಜಿಸಲು ವಿಶೇಷ ಗ್ರಾಮಸಭೆ ನಡೆಸಬೇಕು ಎಂದರು.
ಈ ಸಂದರ್ಭದಲ್ಲಿ ಕೆಪಿಆರ್ ಎಸ್ ತಾಲ್ಲೂಕಾ ಅಧ್ಯಕ್ಷ ಜಾಫರ್ ಖಾನ,ಪ್ರಭು ಪ್ಯಾರಬದ್ದಿ,ಪರಮೇಶ್ವರ ಕಾಂತಾ,ತುಳಜಪ್ಪ ಮೋಘಾ,ತುಕ್ಕಾರಾಮ ಮೋಘಾ,ಜಗದೇವಿ ಚಂದನಕೇರಾ, ಅಹ್ಮದ ಅಲಿ ಅನೇಕರಿದ್ದರು.
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ವಿಮೆ ಹಣ ಕಟ್ಟಿದ ರೈತರು 1,88,000 ರೈತರು,ಜಿಲ್ಲೆಯ ಒಟ್ಟು ರೈತರಿಂದ ಜಮಾ ಆಗಿದ ಹಣ 161ಕೋಟಿ ರೂ.ಜಮಾ ಆಗಿದ್ದು,ಕೇವಲ 91ಕೋಟಿ ರೂ.ಮಾತ್ರ ಬಿಡುಗಡೆ ಮಾಡಿದೆ ಇನ್ನು 115ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು. :- ಶರಣಬಸಪ್ಪ ಮಮಶೇಟ್ಟಿ ಜಿಲ್ಲಾಧ್ಯಕ್ಷರು,ಕೆಪಿಆರ್ ಎಸ್ ಕಲಬುರ್ಗಿ.
