ಉದಯವಾಹಿನಿ, ಇಂಫಾಲ: ಹಿಂಸಾಚಾರದಿಂದ ನಲುಗಿರುವ ಮಣಿಪುರದಲ್ಲಿ ಪ್ರಾದೇಶಿಕ ಸಮಗ್ರತೆ ಕಾಪಾಡಲು ಆಡಳಿತರೂಢ ಬಿಜೆಪಿಯ 23 ಶಾಸಕರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ದರಿಸಿದ್ದಾರೆ.ಮಣಿಪುರದ ಬಿಜೆಪಿ ನೇತೃತ್ವದ ಸರ್ಕಾರದ 23 ಶಾಸಕರು ರಾಜ್ಯದ ಪ್ರಾದೇಶಿಕ ಸಮಗ್ರತೆ ರಕ್ಷಿಸುವ ಪ್ರತಿಜ್ಞೆ ವ್ಯಕ್ತಪಡಿಸುವ ನಿರ್ಣಯಕ್ಕೆ ಸಹಿ ಹಾಕಿದ್ದಾರೆ.
ಕಳೆದ ತಿಂಗಳು ಮೇ ನಿಂದ ಹಿಂಸಾಚಾರದಿಂದ ನಲುಗಿರುವ ಈಶಾನ್ಯ ರಾಜ್ಯದಲ್ಲಿ ಶಾಂತಿ ಕಾಪಾಡಲು ಒತ್ತು ನೀಡುವ ಜೊತೆಗೆ ಗಡಿ ಕಾಪಾಡಿಕೊಳ್ಳಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು 23 ಶಾಸಕರು ಶೀಘ್ರದಲ್ಲೇ ದೆಹಲಿಗೆ ಭೇಟಿ ನೀಡಲು ಉದ್ದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
“ಮಣಿಪುರ ರಾಜ್ಯದ ಪ್ರಾದೇಶಿಕ ಸಮಗ್ರತೆಗಾಗಿ ಜೊತೆಯಾಗಿ ನಿಲ್ಲುತ್ತೇವೆ ಮತ್ತು ಯಾವುದೇ ರೀತಿಯ ಪ್ರತ್ಯೇಕ ಆಡಳಿತ ಬಯಸುವುದಿಲ್ಲ ಎಂದು ಶಾಸಕಾಂಗ ಸಭೆಯ ಎಲ್ಲಾ ಸಹಿ ಮಾಡಿದ ಸದಸ್ಯರು ಸರ್ವಾನುಮತದಿಂದ ಸಹಿ ಹಾಕಿದ್ದರೆ.
