ಉದಯವಾಹಿನಿ, ಕಜಿಎಫ್: ಕೆಜಿಎಫ್ ಹಾಗೂ ಬಂಗಾರಪೇಟೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ೨೫೦೦ ಅನಧಿಕೃತ ಖಾತೆಗಳನ್ನು ತೆರೆಯಲಾಗಿದ್ದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಕೋಲಾರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಸಾಮಾನ್ಯ ಸಭೆಯಲ್ಲಿ ಆಕ್ರಮ ಖಾತೆಗಳನ್ನು ರದ್ದು ಮಾಡುವ ನಿಟ್ಟಿನಲ್ಲಿ ಪ್ರಸ್ಥಾವನೆಯನ್ನು ಮಂಡಿಸಿ ಅನುಮೋಧನೆ ಪಡೆದು ಆಕ್ರಮ ಖಾತೆಗಳನ್ನು ರದ್ದುಪಡಿಸಿದ ನಂತರ ಕಾನೂನು ರೀತಿ ಕ್ರಮವಹಿಸಲಾಗುವುದು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಮೇಂದ್ರ ಹೇಳಿದರು.
ನಗರಾಭಿವೃದ್ದಿ ಪ್ರಾಧಿಕಾರದ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಮೇಂದ್ರ ಆಕ್ರಮ ಲೇಔಟ್‌ಗಳ ತೆರವಿಗೆ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವ ಮೂಲಕ ತೆರವುಗೊಳಿಸಲಾಗುವುದು ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದಿಂದ ಯಾವುದೆ ಅನುಮತಿ ಪಡೆಯದೆ ನಿರ್ಮೀಸಿರುವ ಲೇಔಟ್‌ಗಳಲ್ಲಿ ೨೫೦೦ ಮನೆಗಳನ್ನು ನಿರ್ಮಿಸಿ ಪಂಚಾಯ್ತಿಗಳಲ್ಲಿ ಖಾತೆ ಸಹ ಮಾಡಲಾಗಿದೆ ಇದು ಸರ್ಕಾರಕ್ಕೆ ಬರಬೇಕಿರುವ ಆದಾಯವನ್ನು ಕಡಿತ ಮಾಡುವ
