ಉದಯವಾಹಿನಿ, ಹೊಸಕೋಟೆ : ಹೊಸಕೋಟೆ ತಾಲೂಕಿನ ಶಿವನಾಪುರದಲ್ಲಿ ನಡೆದ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕರಪನಹಳ್ಳಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜಯಗಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ತಾಲೂಕು ಮಟ್ಟಕ್ಕೆಆಯ್ಕೆಯಾಗಿ ಶಾಲೆಗೆ ಕೀರ್ತಿತಂದಿದ್ದಾರೆ0ದು ಮುಖ್ಯ ಶಿಕ್ಷಕಿ ಜಿ. ಶಕುಂತಲ ತಿಳಿಸಿದ್ದಾರೆ.
ಹರಿಕೃಷ್ಣಕ್ಲೆಲೆ ಮಾಡಲಿಂಗ್ ಪ್ರಥಮ, ಕಾರುಣ್ಯ ಛದ್ಮವೇಷ ಪ್ರಥಮ, ತೃಪ್ತಿ ಭಕ್ತಿಗೀತೆ ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆಅಯ್ಕೆಯಾಗಿದ್ದಾರೆ. ತೃಪ್ತಿಅಭಿನಯಗೀತೆ ದ್ವಿತೀಯ, ಅಕ್ಷತಾ ಆಶುಭಾಷಣ ದ್ವಿತೀಯ ಹಾಗೂ ದೀಕ್ಷಾಕಥೆ ಹೇಳುವುದು ತೃತಿಯಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದಾರೆಂದು ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಶಾಲಾ ಶಿಕ್ಷಕ ವೃಂದದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಕರಾದ ಗಾಯಿತ್ರಿ ಎಂ, ಪದ್ಮಎಂ.ಎನ್. ಹಾಗೂ ಪೋಷಕ ವೃಂದದವರು ಹಾಜರಿದ್ದರು.
