
ಉದಯವಾಹಿನಿ,ಚಿಂಚೋಳಿ: ತೊಗರಿ ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾವನ್ನು ಅಬಕಾರಿ ಉಪ ಆಧಿಕ್ಷಕ ವಿಜಯಕುಮಾರ ರಾಂಪೂರೆ ಚಿತ್ತಾಪೂರ,ಉಪ ವಿಭಾಗ ಅಬಕಾರಿ ನಿರೀಕ್ಷಕ ಜಟ್ಟೆಪ್ಪ ಬಿ.ಬೇಲೂರ ನೇತೃತ್ವದಲ್ಲಿ ದಾಳಿ ನಡೆಸಿ ಸುಮಾರು 49ಸಾವಿರ ಬೆಲೆವುಳ್ಳ 6.9ಕೆಜಿ ಗಾಂಜಾ ವಶಕ್ಕೆ ಪಡೆದು ಒಬ್ಬನಿಗೆ ಬಂಧಿಸಲಾಗಿದೆ ಎಂದು ಅಬಕಾರಿ ಸಿಪಿಐ ಜೆಟ್ಟೆಪ್ಪಾ ಬಿ.ಬೇಲೂರ ತಿಳಿಸಿದ್ದಾರೆ.ತಾಲ್ಲೂಕಿನ ಸಂಗಾಪೂರ ಗ್ರಾಮದ ನಿವಾಸಿ ವಿನೋದ ಪಾಂಡು ರಾಠೋಡ್ ಎಂಬುವವರ ಹೊಲದಲ್ಲಿ ತೊಗರಿ ಬೆಳೆ ಸಾಲಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಅಕ್ರಮ ಗಾಂಜಾ ಜಪ್ತಿ ಮಾಡಿಕೊಂಡು ಆರೋಪಿತನನ್ನು ದಸ್ತಗಿರಿಮಾಡಿ ಅವನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಕಟನೆಯಲ್ಲಿ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿಅಬಕಾರಿ ಅಧಿಕಾರಿಗಳಾದ ಪ್ರಕಾಶ ಜಾಧವ,ನರೇಂದ್ರ ಲಕ್ಕ,ಶರಣಗೌಡ ಬಿರಾದಾರ,ಕಲ್ಲಯ್ಯ,ಪುಂಡಲೀಕ,ಶಿವರಾ ಜ,ಸಿದ್ದಾರೂಢ,ಗೌತಮ್ ಬುದ್ಧ,ಶಿವಾಜಿ ಅನೇಕರು ಇದ್ದರು.
