ಉದಯವಾಹಿನಿ, ಮಾಲೂರು:- ತಾಲ್ಲೂಕಿನ ಕಸಬಾ ವಲಯದ ತೊರ‍್ನಹಳ್ಳಿ ಗ್ರಾ.ಪಂ.ಬೆಳ್ಳಾವಿ ಕಾರ್ಯಕ್ಷೇತ್ರದ ಹೆಡಗಿನ ಬೆಲೆ ಗ್ರಾಮದಲ್ಲಿ ನಿಸರ್ಗ ಜ್ಞಾನವಿಕಾಸ ಕೇಂದ್ರದಲ್ಲಿ ಸಿರಿ ಧಾನ್ಯಗಳ ಬಳಕೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಸಿರಿಧಾನ್ಯದ ಮೇಲ್ವಿಚಾರಕರಾದ ಮುರುಳಿ ಅವರು ಸಿರಿ ಧಾನ್ಯಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು 2023 ವರ್ಷವನ್ನು ಸಿರಿ ಧಾನ್ಯಗಳ ವರ್ಷವೆಂದು ಘೋಷಣೆ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ  ಹೆಚ್ಚಾಗಿ ಅಪೌಷ್ಟಿಕ ಆಹಾರ ಸೇವನೆಯನ್ನು ಮಾಡುತ್ತಿದ್ದು ಎಲ್ಲರಿಗೂ ಕೈಗೆಟುಕುವ ಆರೋಗ್ಯಕರವಾದ ಆಹಾರ ಪದ್ಧತಿಯನ್ನು ಅನುಸರಿಸುವಂತೆ ತಿಳಿಸಲಾಯಿತು.ಹಳೆಯ ಕಾಲದಲ್ಲಿ ಜನಗಳ ಆಹಾರ ಪದ್ಧತಿಯು ಉತ್ತಮವಾಗಿದ್ದು ಅವರ ಆರೋಗ್ಯ ಸ್ಥಿತಿಯು ಅಷ್ಟೇ ಚೆನ್ನಾಗಿತ್ತು. ಇತ್ತೀಚಿನ ದಿನಗಳಲ್ಲಿ ನಾವು ಬೆಳೆಯುತ್ತಿರುವ ಆಹಾರ ಪದಾರ್ಥಗಳಲ್ಲಿ ರಾಸಾಯನಿಕ ರಸಗೊಬ್ಬರ ಬಳಕೆಯಿಂದ ವಿಷಪೂರಿತ ಆಹಾರ ಸೇವನೆಯನ್ನು ಮಾಡುತಿದ್ದೇವೆ, ಆದುದ್ದರಿಂದ ನಾವು ಅನೇಕ ರೋಗಗಳಿಂದ ಬಳಲುತ್ತಿದ್ದೇವೆ. ಎಲ್ಲರ ಮನೆಯಲ್ಲೂ ಕಾಣಬಹುದಾದ ಕಾಯಿಲೆಗಳಾದ ಸಕ್ಕರೆ ಕಾಯಿಲೆಗಳು, ಥೈರಾಯ್ಡ್, ಕ್ಯಾನ್ಸರ್, ಈ ಎಲ್ಲಾ ಕಾಯಿಲೆಗಳಿಗೂ ಕೂಡ ಔಷಧಿ ಗುಣವುಳ್ಳ  ಆಹಾರಗಳೆಂದರೆ ಸಿರಿ ಧಾನ್ಯಗಳು ಪ್ರತಿ ಸಿರಿಧಾನ್ಯದಲ್ಲೂ ಕೂಡ ವಿಶೇಷವಾದ ಗುಣಗಳು ಬಂದಿದ್ದು, ನಮ್ಮ ದೇಹಕ್ಕೆ ಪೂರಕವಾದ ಪೌಷ್ಟಿಕಾಂಶಗಳ ನೀಡುವುದರ ಜೊತೆಗೆ ಕಾಯಿಲೆಗಳನ್ನು ಬರದಂತೆ ತಡೆಯುವ ಶಕ್ತಿಯನ್ನು ಹೊಂದಿದೆ ಎಂದು ತಿಳಿಸಿದರು.ಜ್ಞಾನವಿಕಾಸ ಸಮನ್ವಯ ಅಧಿಕಾರಿಗಳು ಕಾರ್ಯಕ್ರಮವನ್ನು ಉದ್ದೇಶಿಸಿ ಮಾಹಿತಿಯನ್ನು ನೀಡಿದರು. ಸಿರಿಧಾನ್ಯಗಳ ಬೆಳೆಯುವ ರೀತಿ ಸಿರಿ ಧಾನ್ಯಗಳಿಂದ ತಯಾರಿಸಬಹುದಾದ ಆಹಾರಗಳ ಬಗ್ಗೆ ಹಾಗೂ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.ಸಿರಿಧಾನ್ಯಗಳಲ್ಲಿ ಮಾಡಲಾದ ರಸ್ಕ್ ಬಿಸ್ಕೆಟ್, ರೊಟ್ಟಿ, ಬಿಸಿಬೇಳೆ ಬಾತ್, ಕೇಸರಿಬಾತ್ ಮುಂತಾದ ಪದಾರ್ಥಗಳ ಬಗ್ಗೆ ಮಾಹಿತಿಯನ್ನು ತಿಳಿಸಲಾಯಿತು.ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ನಾರಾಯಣಸ್ವಾಮಿ, ಆಶಾ, ಶ್ವೇತಾ  ವಿಜಯಲಕ್ಷ್ಮಿ, ಕೇಂದ್ರದ ಅಧ್ಯಕ್ಷರು ಸೌಮ್ಯ, ಲಕ್ಷ್ಮಿ, ಸದಸ್ಯರು ಉಷಾರಾಣಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಹಾಗೂ ಸೇವಾ ಪ್ರತಿನಿಧಿಯಾದ ಆಶಾ, ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!