
ಉದಯವಾಹಿನಿ, ಚಿಂಚೋಳಿ: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ,ಅಧ್ಯಕ್ಷರ ಉಪಾಧ್ಯಕ್ಷರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರಾಗಿ ಚಂದ್ರಕಲಾ ಲಿಂಗಶೇಟ್ಟಿ ತಟ್ಟೆಪಳ್ಳಿ ಆಯ್ಕೆಯಾಗಿ ಕಾಂಗ್ರೆಸ್ ತೆಕ್ಕೆಗೆ ಹಾಕಿಕೊಂಡರೆ ಬಿಜೆಪಿಗೆ ಮುಖಭಂಗವಾಗಿದೆ.ಪಿಕಾರ್ಡ ಬ್ಯಾಂಕ್ ಗೆ ಉಪಾಧ್ಯಕ್ಷರಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಅಮರಜೀವನ ರಮೇಶ ಯಾಕಾಪೂರ ಅವಿರೋಧವಾಗಿ ಆಯ್ಕೆಯಾಗಿದರು.ಪಿಕಾರ್ಡ ಬ್ಯಾಂಕ್ ಗೆ ಸರ್ಕಾರದ ನಾಮನಿರ್ದೇಶನ ನಿರ್ದೇಶಕ ಕೂಡಿಕೊಂಡು ಒಟ್ಟು 15ನಿರ್ದೇಶಕರಲ್ಲಿ ಬಿಜೆಪಿ ಬೆಂಬಲಿತ 6ಸದಸ್ಯರಿದ್ದರೆ,ನಾಮನಿರ್ದೇಶನ ನಿರ್ದೇಶಕ ಸೇರಿ ಕಾಂಗ್ರೆಸ್ 6ನಿರ್ದೇಶಕರು ಇದ್ದರೆ,ರಮೇಶ ಯಾಕಾಪೂರ ಸ್ವತಂತ್ರ ಅಭ್ಯರ್ಥಿಗಳ ಪೇನಲ್ 03ಜನ ನಿರ್ದೇಶಕರು ಆಯ್ಕೆಯಾಗಿರುವುದರಿಂದ ಸ್ವತಂತ್ರ ಅಭ್ಯರ್ಥಿಗಳ ಕಾಂಗ್ರೆಸ್ ಬೆಂಬಲ ಪಡೆದು ಒಟ್ಟು 09 ನಿರ್ದೇಶಕರ ಜೋತೆಗೆ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಬಿಜೆಪಿ ಪಕ್ಷಕ್ಕೆ ಮುಖಭಂಗವುಟ್ಟಾಯಿತು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಚಂದ್ರಕಲಾ ಲಿಂಗಶೇಟ್ಟಿ ತಟ್ಟೆಪಳ್ಳಿ ಸ್ವರ್ದಿಸಿ 09ಮತಗಳು ಪಡೆದು ಜಯಶಾಲಿಯಾದರೆ ಬಿಜೆಪಿಯ ಪ್ರತಿಸ್ವರ್ಧಿ ಅಭ್ಯರ್ಥಿ ಹಣಮಂತರಾವ ಬಸಂತರಾವ ಕೇವಲ 06ಮತಗಳು ಪಡೆದು ಸೋಲುಕಂಡರು.ಸಹಕಾರ ಕ್ಷೇತ್ರದ ಹಿರಿಯ ಧುರಿಣ ರಮೇಶ ಯಾಕಾಪೂರ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸುಭಾಷ್ ರಾಠೋಡ್ ನೇತೃತ್ವದಲ್ಲಿ ಅಧ್ಯಕ್ಷ ಉಪಾಧ್ಯಕ್ಷರಾಗಿ ಜಯ ಸಾಧಿಸಿದವರಿಗೆ ಹಾಗೂ ನಿರ್ದೇಶಕರಿಗೆ ಸನ್ಮಾನಿಸಿ ಗೌರವಿಸಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಲಿ,ಸೇಡಂ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ,ಬಾಬುರಾವ ಪಾಟೀಲ,ನಾಗೇಶ್ವರ ಪಾಟೀಲ,ಬಸವರಾಜ ಸಜ್ಜನ,ಮಧುಸೋದನರೆಡ್ಡಿ,ಅನೀಲ ಜಮಾದಾರ,ಶರಣುಪಾಟೀಲ,ಅಬ್ದುಲ್ ಬಾಷೀದ್,ಸೈಯದ್ ಶಬ್ಬೀರ,ಗೋಪಾಲ ಭೋವಿ,ಚಿರಂಜೀವಿ ಕುಂಚಾವರಂ,ಲಕ್ಷ್ಮಣ ಆವುಂಟಿ,ರಾಮಶೇಟ್ಟಿ ಪವ್ಹಾರ,ತುಕ್ಕಾರಾಮ ಪವ್ಹಾರ,ಶ್ರೀನಿವಾಸ ಬಂಡಿ,ಶೇಖ್ ಫರೀದ್,ಜಗನ್ನಾಥ ಗುತ್ತೇದಾರ,ಸಂತೋಷ ಗುತ್ತೇದಾರ,ಸುಭಾಶ್ಚಂದ್ರ,ಈರಣ್ಣ ಹೊಸಮನಿ,ಅನೇಕರಿದ್ದರು.
