ಉದಯವಾಹಿನಿ,ತಾಳಿಕೋಟೆ: ಪಟ್ಟಣದ ಶ್ರೀ ಎಸ್ ಎಸ್ ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಗುರುವಾರರಂದು ವಿಶ್ವ ಹಿಂದಿ ದಿವಸ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಮುಖ್ಯಸ್ಥ ರಾದ ಅಶೋಕ ಕಟ್ಟಿ ಅವರು ಮಾತನಾಡಿ ವಿದ್ಯಾರ್ಥಿಗಳ ಎಲ್ಲಾ ಭಾಷಾ ಜ್ಞಾನವೆಂಬುದು ಇರಬೇಕು ಎಲ್ಲ ಭಾಷೆಗಳಲ್ಲಿಯೂ ಹಿಂದಿ ಭಾಷೆಯೂ ಕೂಡಾ ಶ್ರೇಷ್ಠತೆಯನ್ನು ಪಡೆದುಕೊಂಡಿದೆ ಹಿಂದಿ ಭಾಷೆ ಬಲ್ಲವರು ಪ್ರಪಂಚದ ಮೂಲೆ ಮೂಲೆ ವ್ಯವಹರಿಸಬಹುದಾಗಿದೆ ಹಿಂದಿ ಭಾಷೆಯಿಂದ ಅನುಕೂಲತೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಪ್ರೌಢಶಾಲೆಯ ಹಿಂದಿ ಶಿಕ್ಷಕರಾದ ಬಿ.ಐ. ಹಿರೇಹೊಳಿ ಅವರು ಮಾತನಾಡಿ ಸೆಪ್ಟೆಂಬರ್ 14-1949 ರಂದು ಸಂವಿಧಾನ ಹಿಂದಿ ವಿಷಯವನ್ನು ಅಂಗೀಕರಿಸಿತು, ಹಿಂದಿ ವಿಷಯ ಪ್ರಚಾರ ಸೆಪ್ಟೆಂಬರ್ 14-1953 ರಿಂದ ಭಾರತದಲ್ಲಿ ಪ್ರತಿವರ್ಷ ಆಚರಿಸುತ್ತಾ ಬಂದಿದೆ ಎಂದು ಹಿಂದಿ ಭಾಷೆಯ ಮತ್ವ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಎಸ್.ವಿ ಜಾಮಗೊಂಡಿ, ಎಸ್.ಸಿ ಗುಡಗುಂಟಿ, ಎಚ್.ಬಿ. ಪಾಟೀಲ, ಎಮ್.ಎಸ್ ರಾಯಗೊಂಡ, ಯು.ಎಚ್. ಗಟನೂರ, ಶ್ರೀಮತಿ ಎ.ಸಿ ಗುಮಶೆಟ್ಟಿ, ಕುಮಾರಿ ಜ್ಯೋತಿ ಪೆÇೀಲಿಸಪಾಟೀಲ, ಮೊದಲಾದವರು ಉಪಸ್ಥಿತರಿದ್ದರು.
