
ಉದಯವಾಹಿನಿ ಮಾಲೂರು: ಸಂವಿಧಾನ ಪೀಠಿಕೆ ಓದುವ ಮೂಲಕ ಸಂವಿಧಾನವನ್ನು ಗೌರವಿಸಿ ಉಳಿಸಿಕೊಳ್ಳುವ ಕೆಲಸ ಎಲ್ಲಾ ಸರ್ಕಾರದ ರಾಜಕಾರಣಿಗಳ ಜವಾಬ್ದಾರಿಯಾಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಅರಿವು ಭಾರತ, ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಶಾಲೆಯಿಂದ ಹೊರಗಡೆ ಕಳುಹಿಸಿದ ಒಬ್ಬ ವಿದ್ಯಾರ್ಥಿ ಭಾರತ ದೇಶಕ್ಕೆ ಸಂವಿಧಾನ ರಚನೆ ಮಾಡಿಕೊಟ್ಟು, ಪ್ರಪಂಚದಲ್ಲಿ ಭಾರತವನ್ನು ಸಂವಿಧಾನದ ಮಹತ್ವವನ್ನು ಸಾರುವ ರೀತಿ ಡಾ.ಬಿ.ಆರ್. ಅಂಬೇಡ್ಕರ್ ರವರು ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯರವರು ರಾಜ್ಯಾದ್ಯಂತ ಎಲ್ಲಾ ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಕಡ್ಡಾಯ ಗೊಳಿಸಿದ್ದು ಮುಖ್ಯಮಂತ್ರಿಗಳ ಆಶಯವು ಉತ್ತಮ ನಿರ್ದಾರವಾಗಿದೆ. ಯಾವುದೇ ಸರ್ಕಾರವಿರಲಿ ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ಎಲ್ಲ ವರ್ಗಗಳ ಸಮಾನತೆಯನ್ನು ತೋರಿ ಸಂವಿಧಾನವನ್ನು ಗೌರವದಿಂದ ಕಾಣಬೇಕು.
ಸಂವಿಧಾನದ ವಿರೋಧಿ ಹೇಳಿಕೆ ಮತ್ತು ಬದಲಾವಣೆ ಬಗ್ಗೆ ಯಾರಾದರು ಮಾತನಾಡಿದರೆ ಅವರ ವಿರುದ್ಧ ಹೋರಾಟ ನಡೆಸಲಾಗುವುದು. ಯಾವುದೇ ಜಾತಿ ಧರ್ಮಕ್ಕೆ ಸಂವಿಧಾನ ರಚನೆ ರೂಪಿಸಿಲ್ಲ ಎಲ್ಲಾ ವರ್ಗಗಳ ಸಮಾನತೆ ಸಂವಿಧಾನವಾಗಿದೆ. ಸಂವಿಧಾನವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.ಪಟ್ಟಣದ ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಯಿಂದ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಸಂವಿಧಾನ ಪೀಠಿಕೆ ಓದಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಶಾಸಕ ಕೆ.ವೈ.ನಂಜೇಗೌಡರು ಮಜ್ಜಿಗೆ ವ್ಯವಸ್ಥೆ ಮಾಡಿದ್ದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ರಮೇಶ್, ತಾ.ಪಂ. ಇಒ ಕೃಷ್ಣಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆ ಡಿಡಿಪಿಯು ರಾಮಚಂದ್ರಪ್ಪ, ಪೋಲಿಸ್ ಇನ್ಸ್ ಪೆಕ್ಟರ್ ಚಂದ್ರಾದರ್, ಅರಿವು ಶಿವಪ್ಪ, ವಿಜಯಕುಮಾರ್, ಮುನಿವೆಂಕಟಪ್ಪ, ಡಿಸಿಸಿ ಅಧ್ಯಕ್ಷ ಸಿ.ಲಕ್ಷ್ಮೀನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಧುಸೂದನ್, ಕೋಡೂರು ಗೋಪಾಲ್, ತಿಪ್ಪಸಂದ್ರ ಶ್ರೀನಿವಾಸ್, ಅಶ್ವಥ್ ರೆಡ್ಡಿ, ಪರಮೇಶ್, ಮುರಳೀಧರ್, ಮೈಲಾಂಡಹಳ್ಳಿನಾರಾಯಣಸ್ವಾಮಿ, ಎಂ.ಆಂಜಿನಪ್ಪ, ಹನುಮಂತ ರೆಡ್ಡಿ, ಬೆಡಶೆಟ್ಟಹಳ್ಳಿ ರಮೇಶ್, ಎಚ್.ನಾರಾಯಣಸ್ವಾಮಿ, ಗೋವಿಂದ ಸ್ವಾಮಿ, ಎಂ.ನಂಜುಂಡೇಗೌಡ, ಮೋಹನ್, ಪುರಸಭಾ ಮುಖ್ಯಾಧಿಕಾರಿ ಪ್ರದೀಪ್, ಸಮಾಜ ಕಲ್ಯಾಣ ಇಲಾಖೆ ಶಿವಕುಮಾರ್, ಹರಿಪ್ರಸಾದ್, ಎಟ್ಟಕೋಡಿ ವೆಂಕಟೇಶ್, ಲಕ್ಕೂರು ವೆಂಕಟೇಶ್, ಎಟ್ಟಕೋಡಿ ಸಂತೋಷ್, ಚನ್ನಕಲ್ ಸಂತೋಷ್, ನಾಗಪುರ ನವೀನ್, ಶಬ್ಬೀರ್, ರೋಹಿತ್, ದೇವರಾಜ್, ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.
