ಉದಯವಾಹಿನಿ ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ, ಆಧಾರ್ ಕರ‍್ಡ್ ಅನ್ನು ಉಚಿತವಾಗಿ ನವೀಕರಿಸಲು ಕೊನೆಯ ದಿನಾಂಕವನ್ನು ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸಿದೆ.ಸೆಪ್ಟಂಬರ್ ೧೪ ರಿಂದ ಅನ್ವಯವಾಗುವಂತೆ ಡಿಸೆಂಬರ್ ೧೪ ರ ತನಕ ಆಧಾರ್ ಕರ‍್ಡ್ ಮಾಹಿತಿ ನವೀಕರಣ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಮರ‍್ಚ್ ೧೫ ರಂದು, ೧೦ ರ‍್ಷ ಹಳೆಯ ಕರ‍್ಡ್ ಹೊಂದಿರುವ ಮಂದಿ ಆಧಾರ್ ಕರ‍್ಡ್ ಅನ್ನು ನವೀಕರಿಸುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಉಚಿತ ನೋಂದಣಿ ಅವಧಿಯನ್ನು ಮತ್ತೆ ಮೂರು ತಿಂಗಳು ವಿಸ್ತರಿಸಿದೆ.ಗಡುವಿನ ಮೊದಲು ನಿಮ್ಮ ವಿಳಾಸ, ಹೆಸರು ಮತ್ತು ನಿಮ್ಮ ಆಧಾರ್‌ನ ಇತರ ವಿವರಗಳನ್ನು ನವೀಕರಿಸುವುದು ಕಡ್ಡಾಯವಾಗಿದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಹೇಳಿದೆ.
ನಿಮ್ಮ ಗುರುತಿನ ಪುರಾವೆಯನ್ನು ಮೌಲ್ಯೀಕರಿಸಲು ಸಹಾಯ ಮಾಡುವ ಕಾರಣ ನಿಮ್ಮ ಆಧಾರ್ ಅನ್ನು ನವೀಕರಿಸುವುದು ಕಡ್ಡಾಯವಾಗಿದೆ. “ಜನಸಂಖ್ಯಾ ಮಾಹಿತಿಯ ನಿರಂತರ ನಿಖರತೆಗಾಗಿ ಆಧಾರ್ ಅನ್ನು ನವೀಕರಿಸಿ. ನಿಮ್ಮ ಗುರುತಿನ ಮತ್ತು ವಿಳಾಸ ಪುರಾವೆಗಳನ್ನು ಅಪ್‌ಲೋಡ್ ಮಾಡಿ ಎಂದು ಮನವಿ ಮಾಡಿದೆ. ಸಾಮಾನ್ಯವಾಗಿ, ಆಧಾರ್ ಅನ್ನು ನವೀಕರಿಸಲು ರೂ ೫೦ ವೆಚ್ಚವಾಗುತ್ತದೆ. ಆದರೆ ಅದನ್ನು ಸೆಪ್ಟೆಂಬರ್ ೧೪ ರ ಮೊದಲು ಅಧಿಕೃತ ಪರ‍್ಟಲ್‌ನಿಂದ ನವೀಕರಿಸಿದರೆ, ಅದು ಉಚಿತವಾಗಿದೆ. ಉಚಿತ ಸೇವೆಯನ್ನು ಪ್ರವೇಶಿಸಲು ಆಧಾರ್ ಹೊಂದಿರುವವರು ತಮ್ಮ ಕರ‍್ಡ್‌ಗಳನ್ನು ನವೀಕರಿಸಬಹುದು. ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀವು ಒಟಿಪಿ ಅನ್ನು ಸ್ವೀಕರಿಸುತ್ತೀರಿ ಅದರ ನಂತರ ನೀವು ಯಾವುದೇ ಬದಲಾವಣೆಗಳನ್ನು ಮಾಡಬಹುದು ಎಂದಿದೆ.
