ಉದಯವಾಹಿನಿ, ದುಬೈ: ಪ್ರತಿಷ್ಠಿತ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್-ಸೈಮಾ ಈ ವರ್ಷದ ಪ್ರಶಸ್ತಿ ಪ್ರಕಟವಾಗಿದೆ. ಕೆಜಿಎಫ್ -೨ ಚಿತ್ರದ ನಟನೆಗಾಗಿ ನಟ ಯಶ್ ಅತ್ಯುತ್ತಮ ನಟ ಹಾಗೂ ಶ್ರೀನಿಧಿ ಶೆಟ್ಟಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಾಂತಾರ ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶ ಪ್ರಶಸ್ತಿ ರಿಷಬ್ ಶೆಟ್ಟಿ ಮುಡಿಗೇರಿದ್ದು ಇದರ ಜೊತೆಗೆ ಕಾಂತಾರ ಚಿತ್ರ ೮ ವಿಭಾಗಗಳಲ್ಲಿ ಪ್ರಶಸ್ತಿ ಪಡೆಯುವ ಮೂಲಕ ಪ್ರಶಸ್ತಿ ಪಟ್ಟಿಯಲ್ಲಿ ಸಿಂಹಪಾಲು ಪಡೆದಿದೆ.ಅತ್ಯುತ್ತಮ ಸಿನಿಮಾ ಪ್ರಶಸ್ತಿ ೭೭೭ ಚಾರ್ಲಿ ಚಿತ್ರ ಪಡೆದು ಕೊಂಡಿದೆ. ಕೆಜಿಎಫ್ ಚಾಪ್ಟರ್ ೨ ಚಿತ್ರಕ್ಕಾಗಿ ಅತ್ಯುತ್ತಮ ಛಾಯಾಗ್ರಹಣ ಭುವನ್ ಗೌಡ, ಅತ್ಯುತ್ತಮ ಗಾಯಕಿ ಸುನಿಧಿ ಚೌಹಾಣ್ ಅವರು ಹಾಡಿದ ‘ರಾ ರಾ ರಕ್ಕಮ್ಮ ಹಾಡಿಗೆ ಲಭಿಸಿದೆ, ಕಾಂತಾರ ಚಿತ್ರದ ಸಿಂಗಾರ ಸಿರಿಯೆ ಹಾಡಗಾಗಿ ವಿಜಯ್ ಪ್ರಕಾಶ್ ಅತ್ಯುತ್ತಮ ಗಾಯಕ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಅತ್ಯುತ್ತಮ ಗೀತರಚನೆಕಾರ- ಪ್ರಮೋದ್ ಮರವಂತೆ ಕಾಂತಾರ ಚಿತ್ರದ ಸಿಂಗಾರ ಸಿರಿಯೇ, ಅತ್ಯುತ್ತಮ ಸಂಗೀತ ನಿರ್ದೇಶನ ಅಜನೀಶ್ ಲೋಕನಾಥ್ ಕಾಂತಾರ ಚಿತ್ರಕ್ಕೆ ಪಡೆದುಕೊಂಡಿದ್ದಾರೆ.
