
ಉದಯವಾಹಿನಿ, ದೇವದುರ್ಗ:- ರಾಜ್ಯದಲ್ಲಿ ಮಳೆಯ ತೀವ್ರ ಕೊರತೆ ಉಂಟಾಗಿದ್ದು, ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ಅತಿ ಹೆಚ್ಚು ಕೃಷಿ ಕೂಲಿಕಾರರು ನಿತ್ಯ ಕೂಲಿ ಹರಿಸಿ ಜಿಲ್ಲೆಯಾದ್ಯಂತ ಹೋಗುತ್ತಾರೆ. ಬರ ಹಿನ್ನೆಲೆಯಲ್ಲಿ ಕೂಲಿಕಾರರಿಗೆ ಕೆಲಸ ಇಲ್ಲದೆ ತೀವ್ರ ತೊಂದರೆ ಎದುರಿಸುವಂತಾಗಿದ್ದು,ಅಗತ್ಯ ಪರಿಹಾರ ನೀಡುವಂತೆ ಕೃಷಿ ಕೂಲಿಕಾರರ ಸಂಘಟನೆ ಒತ್ತಾಯಿಸುತ್ತದೆ. ರಾಜ್ಯದಲ್ಲಿ 195 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರಘೋಷಣೆ ಮಾಡಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಸಿದ್ದತೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಳೆ ಯ ಕೊರತೆಯಿಂದ ಆದ ಹಾನಿ, ಕೂಲಿಕಾರರ ಪರಿಸ್ಥಿತಿ, ರೈತರ ಬೆಳೆ ನಷ್ಟ, ರೈತರ ಬ್ಯಾಂಕ್ ಸಾಲದ ವಿವರ, ದನಕರುಗಳ ಮೇವಿನ ಅಭಾವ, ಕುಡಿಯುವ ನೀರಿನ ತೊಂದರೆ ಬಗ್ಗೆ ಸಂಪೂರ್ಣ ವರದಿ ಕಳುಹಿಸುವಂತೆ ಸರ್ಕಾರ ಆದೇಶ ನೀಡಿದೆ. ಇತರೆ 40 ತಾಲೂಕುಗಳಲ್ಲಿ ಭಾಗಶಃ ಬರದ ಪರಿಸ್ಥಿತಿ ಇದೆ ಕುಡಿಯುವ ನೀರು, ದನಕರುಗಳಿಗೆ ಮೇವು, ಕೂಲಿಕಾರರಿಗೆ ಕೆಲಸದ ಕೊರತೆ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯ ಅಭಾವದಿಂದ ರೈತರು ಕೃಷಿಯಿಂದ ಕಂಗಾಲಾಗಿದ್ದಾರೆ. ಕಳೆದ 10 ವರ್ಷದಿಂದ ನೋಡದ ಬರಪರಸ್ಥಿತಿ ನಿರ್ಮಾಣವಾಗಿದೆ.ಕೃಷಿ ಕೂಲಿಕಾರರು ವಲಸೆ ಹೋಗುವುದು ಹೆಚ್ಚಾಗಿದ್ದು, ರಾಯಚೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕೃಷಿ ಕೂಲಿಕಾರರಿಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ತಕ್ಷಣ ಕೆಲಸ ನೀಡಬೇಕು ಮತ್ತು ಸಂಕಷ್ಟದಲ್ಲಿರುವ ಕೂಲಿಕಾರರಿಗೆ ಒಂದು ಕುಟುಂಬಕ್ಕೆ ಕನಿಷ್ಠ 10ಸಾವಿರ 6ತಿಂಗಳ ಕಾಲ ಪರಿಹಾರ ನೀಡಬೇಕು.ಮತ್ತು ಸೊಸೈಟಿ, ಬ್ಯಾಂಕ್ ಸಾಲ,ಖಾಸಗಿ ಸಾಲಗಾರರಿಂದ ರೈತರ ರಕ್ಷಣೆ ಬಗ್ಗೆ ಕ್ರಮ ಜರುಗಿಸಿ ಬರಪರಿಹಾರ ಕೈಗೊಳ್ಳಬೇಕೆಂದು ಕೂಲಿಕಾರರ ಸಂಘಟನೆಯು ಒತ್ತಾಯಿಸುತ್ತದೆ.
ಬರ ಹಿನ್ನೆಲೆಯಲ್ಲಿ ರೈತ ಕೂಲಿಕಾರರಿಗೆ ಅಗತ್ಯ ಪರಿಹಾರ ನೀಡುವಂತೆ ಒತ್ತಾಯಿಸಿ ಕೃಷಿ ಕೂಲಿಕಾರರ ಸಂಘಟನೆ ಜಿಲ್ಲಾ ಸಮಿತಿಯಿಂದ ಇದೇ ಸೆಪ್ಟೆಂಬರ್ 26ರಂದು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಧರಣಿ ಮುಖಾಂತರ ಸರ್ಕಾರಕ್ಕೆ ಒತ್ತಾಯಿಸಲಾಗುತ್ತದೆ ಎಂದು ಕೃಷಿ ಕೂಲಿಕಾರರ ಸಂಘಟನೆ ತಾಲ್ಲೂಕು ಅಧ್ಯಕ್ಷ ಲಿಂಗಣ್ಣ ಮಕಾಶಿ, ಕಾರ್ಯದರ್ಶಿ ಶಿವನಗೌಡ ನಾಯಕ ಮದರಕಲ್ ಪತ್ರಿಕೆ ಹೇಳಿಕೆ ನೀಡಿದ್ದಾರೆ.
