ಉದಯವಾಹಿನಿ, ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕು ದೊಡ್ಡೇರಿ ಗ್ರಾಮ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೊಡ್ಡೇರಿ. ಏಳನೇ ತರಗತಿಯಲ್ಲಿ ಓದುತ್ತಿರುವ Y ಸುಜಾತ ಎಂಬ ವಿದ್ಯಾರ್ಥಿನಿಯು ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಬೆಳಗೆ ರಾ ಎಂಬ ಗ್ರಾಮದಿಂದ ಬಂದು ಬಡ ಕುಟುಂಬದವಳು ಇವರ ತಂದೆ ಯಲ್ಲಪ್ಪ ತಾಯಿ ದ್ರೌಪದಮ್ಮ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡಿಕೊಂಡು ದೊಡ್ಡೇರಿ ಸರ್ಕಾರಿ ಶಾಲೆಯಲ್ಲಿ ಮಗಳನ್ನು ಓದುತ್ತಿದ್ದು ಬೆಂಗಳೂರು ದಕ್ಷಿಣ ವಲಯ 1 ರಲ್ಲಿ ತಾಲೂಕು ಮಟ್ಟದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿ 600 ಮೀಟರ್ 200 ಮೀಟರ್ ರನ್ನಿಂಗ್ ನಲ್ಲಿ ಪ್ರಥಮ ಸ್ಥಾನ ಹಾಗೂ 100 ಮೀಟರ್ ಅಲ್ಲಿ ತೃತೀಯ ಸ್ಥಾನ ಪಡೆದು ತಾಲೂಕಿಗೆ ಚಾಂಪಿಯನ್ ಶಿಪ್ ಗಳಿಸಿದ್ದಾಳೆ.
ಗಣಪತಿಹಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಒಟ್ಟುಗೂಡಿಸಿ ಮೂರು ಶಾಲೆಗಳಿಂದ ತರಳಬಾಳು ಪ್ರೌಢಶಾಲೆ ಸೆಕ್ರೆಟ್ ಎಜುಕೇಶನ್ ಶಾಲೆ ಆರ್‌ಪಿಎಸ್ ಚಿಲ್ಡ್ರನ್ಸ್ ಶಾಲೆಯಲ್ಲಿ ಗಣಪತಿಹಳ್ಳಿ ಕ್ಲಸ್ಟರ್ ವಿಭಾಗದ ಸರ್ಕಾರಿ ಪ್ರತಿಭಾ ಕಾರಂಜಿ ಏರ್ಪಡಿಸಲಾಗಿತ್ತು ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರು ಹಾಲಿ ಶಾಸಕರು ಯಶವಂತಪುರ ವಿಧಾನಸಭಾ ಕ್ಷೇತ್ರ ಎಸ್ ಟಿ ಸೋಮಶೇಖರ್ ಗೌಡರ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಸುಜಾತ ರನ್ನು ಈ ನಮ್ಮ ತಾಲೂಕಕ್ಕೆ ಕ್ರೀಡೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಚಾಂಪಿಯನ್ ಗುರಿಯನ್ನು ಸಾಧಿಸಿದ್ದಾರೆ ಎಂದು ಬಾಲ್ಯದಲ್ಲೇ ಇಂಥ ಮಕ್ಕಳಿಗೆ ಅತಿ ಹೆಚ್ಚು ಪ್ರೋತ್ಸಾಹ ನೀಡಬೇಕೆಂದು ರಾಷ್ಟ್ರಮಟ್ಟದ ಕ್ರೀಡಾ ಭಾಗವಹಿಸಲೆಂದು ನುಡಿಮುತ್ತುಗಳನ್ನು ನುಡಿದರು. ಹಾಗೂ ಈ ಕಾರ್ಯಕ್ರಮದ ಆಗಮಿಸಿದ ಮಾಜಿ ಅಧ್ಯಕ್ಷರಾದ ಹಾಲು ಒಕ್ಕೂಟದ ಶ್ರೀ ನರಸಿಂಹಮೂರ್ತಿ. ಚುಂಚನಗುಪ್ಪೆ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಪಂಕಜ ಚಂದ್ರಶೇಖರ್. ಉಪಾಧ್ಯಕ್ಷರಾದ ರಾಮಾಂಜನೇಯ ಗೌಡ ಸದಸ್ಯರಾದ ಸುಕುಮಾರ್CR. ಕಾವೇರಿ ಡ್ರೈವಿಂಗ್ ಸ್ಕೂಲಿನ ಮಾಲೀಕರಾದ ಸಮಾಜ ಸೇವಕರಾದ ಕೃಷ್ಣಯ್ಯ. ಸರ್ಕಾರಿ ಶಾಲೆಯ ಎಲ್ಲಾ ಮುಖ್ಯ ಉಪಾಧ್ಯಾಯರು. ಆರ್‌ಪಿಎಸ್ ಚಿಲ್ಡ್ರನ್ ಸ್ಕೂಲಿನ ಮುಖ್ಯಸ್ಥರಾದ ರೇವಣಸಿದ್ದಪ್ಪನವರು ಸಮಾಜ ಸೇವಕರು. ಹಿರಿಯ ನಾಗರಿಕರು ನಾಗರಿಕರು ಎಲ್ಲರೂ ಈ ಮಕ್ಕಳ ಕಾರ್ಯಕ್ರಮಕ್ಕೆ ಯಶಸ್ವಿಗೆ ಪಾತ್ರರಾದರು.

Leave a Reply

Your email address will not be published. Required fields are marked *

error: Content is protected !!