ಉದಯವಾಹಿನಿ , ನವದೆಹಲಿ: “ದೇಶವನ್ನು ೨೦೪೭ ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವಾಗಲು ಸಂಕಲ್ಪತೊಡಲಾಗಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಕೆಲವು ವರ್ಷಗಳಲ್ಲಿ, ವಿಶ್ವದಲ್ಲಿಯೇ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಧಾರ್ ಕಾರ್ಡ್‌ಗಳು, ಡಿಜಿಟಲ್ ಲಾಕರ್‌ಗಳು ಮತ್ತು ಇಕೆವೈಸಿ ದಾಖಲಾತಿಗಳ ಸಂಕೀರ್ಣತೆ ತೊಡೆದುಹಾಕಲಾಗಿದೆ. ತಂತ್ರಜ್ಞಾನದ ಅವಳಡಿಕೆಯಿಂದ ಭ್ರಷ್ಟಾಚಾರ ಕಡಿಮೆಯಾಗಿದೆ ಮತ್ತು ವಿಶ್ವಾಸಾರ್ಹತೆ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ಸೇರ್ಪಡೆಗೊಂಡವರಿಗೆ ಸುಮಾರು ೫೧,೦೦೦ ನೇಮಕಾತಿ ಪತ್ರಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿತರಿಸಿ ಮಾತನಾಡಿದರು.
“ಕಳೆದ ೯ ವರ್ಷಗಳಲ್ಲಿ, ಯೋಜನೆಗಳು ದೊಡ್ಡ ಗುರಿ ಸಾಧಿಸಲು ದಾರಿ ಮಾಡಿಕೊಟ್ಟಿವೆ. ನೀತಿಗಳು ಹೊಸ ಮನಸ್ಥಿತಿ, ವಿಷಯ ಮಾನಿಟರಿಂಗ್, ಮಿಷನ್ ಮೋಡ್ ಅನುಷ್ಠಾನ ಮತ್ತು ಸಾಮೂಹಿಕ ಭಾಗವಹಿಸುವಿಕೆ ಆಧರಿಸಿವೆ. ೯ ವರ್ಷಗಳಲ್ಲಿ ಸರ್ಕಾರ ಮಿಷನ್ ಮೋಡ್‌ನಲ್ಲಿ ನೀತಿ ಜಾರಿಗೆ ತಂದಿದೆ ಎಂದಿದ್ದಾರೆ.
ತಂತ್ರಜ್ಞಾನದೊಂದಿಗೆ ಬೆಳೆದ ಪೀಳಿಗೆಯ ಭಾಗವಾಗಿದ್ದೀರಿ….ನಿಮ್ಮ ಕೆಲಸದಲ್ಲಿ ತಂತ್ರಜ್ಞಾನವನ್ನು ಬಳಸಬೇಕಾಗಿದೆ” ದೇಶ ಐತಿಹಾಸಿಕ ಸಾಧನೆಗಳು ಮತ್ತು ನಿರ್ಧಾರಗಳಿಗೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಕೆಲವು ದಿನಗಳ ಹಿಂದೆ, ದೇಶದ ಅರ್ಧದಷ್ಟು ಜನಸಂಖ್ಯೆಯು ನಾರಿ ಶಕ್ತಿ ವಂದನ್ ಕಾಯ್ದೆಯ ರೂಪದಲ್ಲಿ ದೊಡ್ಡ ಶಕ್ತಿಯನ್ನು ಪಡೆದುಕೊಂಡಿದೆ.

Leave a Reply

Your email address will not be published. Required fields are marked *

error: Content is protected !!