ಉದಯವಾಹಿನಿ, ಸಿಡ್ನಿ: ಕೆಲವರು, ಲೈಂಗಿಕ ತೃಪ್ತಿಗಾಗಿ ಯಾರೂ ಊಹಿಸಲೂ ಸಾಧ್ಯವಾಗದಷ್ಟು ಮಟ್ಟಿಗೆ ಕುಕೃತ್ಯಕ್ಕೆ ತೊಡಗಿ ಅಂತಹ ಜನರು ತಮ್ಮ ಇಚ್ಛೆಗೆ ಯಾರನ್ನಾದರೂ ಲೈಂಗಿಕವಾಗಿ ಬಳಸಿಕೊಳ್ಳಲು ಮತ್ತು ಅತ್ಯಾಚಾರ ಮಾಡಲು ಹಿಂಜರಿಯುವುದಿಲ್ಲ.
ಇದೀಗ ಇಂತಹ ಅಮಾನುಷ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಇಲ್ಲಿ ಒಬ್ಬ ವ್ಯಕ್ತಿ ಒಟ್ಟು ೪೨ ನಾಯಿಗಳಿಗೆ ಚಿತ್ರಹಿಂಸೆ, ಅತ್ಯಾಚಾರ ಮತ್ತು ಕೊಲೆ ಮಾಡಿದ ಅಪರಾಧಿ ಎಂದು ಕಂಡುಬಂದಿದೆ. ಈ ಮನುಷ್ಯನ ವ್ಯಾಮೋಹ ಎಷ್ಟಿತ್ತೆಂದರೆ, ಪ್ರಾಣಿಗಳಿಗೆ ಚಿತ್ರಹಿಂಸೆ ನೀಡುವ ವಿಡಿಯೋಗಳನ್ನೂ ಮಾಡಿ ವಿಕೃತಿ ಮೆರೆದಿದ್ದಾನೆ. ಹೆಸರಾಂತ ಮೊಸಳೆ ತಜ್ಞ ಆಡಮ್ ರಾಬರ್ಟ್ ಕಾರ್ಡೆನ್ ಬ್ರಿಟನ್ ಅವರು ನಾಯಿಗಳಿಗೆ ಚಿತ್ರಹಿಂಸೆ ನೀಡಿ, ನಾಯಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿ, ಕ್ರೂರವಾಗಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಬ್ರಿಟನ್ ತನ್ನ ವಿಚಾರಣೆಯ ಸಮಯದಲ್ಲಿ ಪ್ರಾಣಿಗಳ ವಿರುದ್ಧ ಭಯಾನಕ ಅಪರಾಧಗಳನ್ನು ಒಪ್ಪಿಕೊಂಡಿದ್ದಾನೆ. ಬ್ರಿಟನ್ ಏಪ್ರಿಲ್ ೨೦೨೨ ರಲ್ಲಿ ಬಂಧಿಸುವವರೆಗೂ ೪೨ ಕ್ಕೂ ಹೆಚ್ಚು ನಾಯಿಗಳನ್ನು ಅತ್ಯಾಚಾರ, ಚಿತ್ರಹಿಂಸೆ ಮತ್ತು ಕೊಂದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಮೊಸಳೆಗಳ ಬಗ್ಗೆ ಪರಿಣಿತರಾಗಿರುವ ಬ್ರಿಟನ್, ಒಟ್ಟು ೫೬ ಆರೋಪಗಳನ್ನು ಎದುರಿಸುತ್ತಿದ್ದಾರೆ.
