ಉದಯವಾಹಿನಿ, ಬೆಂಗಳೂರು: ಮನೆಯ ಹೊರಗಡೆಯ ಶೂ ಬಾಕ್ಸ್ ನಲ್ಲಿಟ್ಟು ಹೋಗಿದ್ದ ಕೀ ಯನ್ನು ಗಮನಿಸಿ ಅದರಿಂದ ಬೀಗ ತೆಗೆದು ನಗದು ಚಿನ್ನಾಭರಣಗಳನ್ನು ದೋಚಿದ್ದ ಪಕ್ಕದ ಮನೆಯ ಖತರ್ನಾಕ್ ಮಹಿಳೆಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕೊಟ್ಟಿಗೆಪಾಳ್ಯದ ರತ್ನ(೩೦) ಬಂಧಿತ ಆರೋಪಿಯಾಗಿದ್ದು,ಆಕೆಯಿಂದ ೫೦ ಸಾವಿರ ನಗದು ಸೇರಿ ೧.೬ ಲಕ್ಷ ಮೌಲ್ಯದ ೧೭.೭ ಗ್ರಾಂ ತೂಕದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಕಳೆದ ಸೆ.೧೦ ರಂದು ಮಧ್ಯಾಹ್ನ ೧ರ ವೇಳೆ ಕೊಟ್ಟಿಗೇಪಾಳ್ಯದ ಒಂದನೇ ಮುಖ್ಯರಸ್ತೆಯ ಮನೆಗೆ ಬೀಗ ಹಾಕಿಕೊಂಡು ಮಹದೇವ್ ಅವರು ಬೀಗದ ಕೀಯನ್ನು ಹೊರಗಡೆಯ ಶೂ ಬಾಕ್ಸ್ ನಲ್ಲಿಟ್ಟು ಸ್ವಂತ ಊರಿಗೆ ಹೋಗಿ ಸೆ.೨೨ ರಂದು ವಾಪಾಸು ಬಂದು ನೋಡಿದಾಗ ರೂಮಿನ ಬೀರುವಿನಲ್ಲಿದ್ದ ೧ಲಕ್ಷ ರೂ. ನಗದು ೧೪.೫ ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಮಹದೇವ್ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಪಕ್ಕದ ಮನೆಯ ಖದೀಮಳನ್ನು ಬಂಧಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!