ಉದಯವಾಹಿನಿ, ಹ್ಯಾಂಗ್ಝೌ,: ಚೀನಾದಲ್ಲಿ ನಡೆಯುತ್ತಿರುವ 19 ಏಷ್ಯಾನ್ ಗೇಮ್ಸ್‍ನ 54 ಕೆಜಿ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡ ಭಾರತದ ಮಹಿಳಾ ಬಾಕ್ಸರ್ ಪ್ರೀತಿ ಪವಾರ್ ಅವರು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಚೀನಾದ ಜಂಗ್ ಯೂನ್ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪ್ರಬಲ ಪೈಪೋಟಿ ಎದುರಿಸಿದ ಪ್ರೀತಿ ಪವಾರ್ ಆರಂಭದಲ್ಲಿ ಎದುರಾಳಿ ಬಾಕ್ಸರ್‍ಗೆ ಬಲವಾದ ಪಂಚ್‍ಗಳನ್ನು ಕೊಡುವ ಮೂಲಕ ಮೇಲುಗೈ ಸಾಧಿಸಿದರು.
ಪಂದ್ಯದ ಮುಕ್ತಾಯದ ವೇಳೆ ಚೀನಾದ ಚೀನಾದ ಜಂಗ ಯೂನ್ ಮೇಲುಗೈ ಸಾಧಿಸಿ ಸೆಮಿಫೈನಲ್‍ಗೆ ಲಗ್ಗೆ ಇಟ್ಟರು. ಕಂಚಿನ ಪದಕ ಗೆಲ್ಲುವ ಮೂಲಕ 2024ರ ಒಲಿಂಪಿಕ್ಸ್ ಗೆ ಪ್ರೀತಿ ಅರ್ಹತೆ ಪಡೆದುಕೊಂಡಿದ್ದಾರೆ.
