ಉದಯವಾಹಿನಿ, ಮ್ಯಾಡ್ರಿಡ್ : ಆಗ್ನೇಯ ಸ್ಪ್ಯಾನಿಷ್ ನಗರದ ಮುರ್ಸಿಯಾದಲ್ಲಿನ ನೈಟ್‍ಕ್ಲಬ್‍ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಅವಘಡದಲ್ಲಿ 13 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ಜನಪ್ರಿಯ ಟೀಟರ್ ನೈಟ್‍ಕ್ಲಬ್‍ನಲ್ಲಿ ಬೆಳಿಗ್ಗೆ 6 ಗಂಟೆಗೆ ಕಾಣಿಸಿಕೊಂಡ ಬೆಂಕಿ ತಕ್ಷಣ ಇತರ ಪ್ರದೇಶಗಳಿಗೂ ಹಬ್ಬಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಬೆಂಕಿ ಅವಘಡಕ್ಕೆ ಕಾರಣವೇನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಘಟನೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ.ಮುರ್ಸಿಯಾ ಪ್ರದೇಶದಾದ್ಯಂತ ಸಾರ್ವಜನಿಕ ಕಟ್ಟಡಗಳ ಮೇಲೆ ಧ್ವಜಗಳನ್ನು ಅರ್ಧದಷ್ಟು ಹಾರಿಸುವುದರೊಂದಿಗೆ ನಗರ ಸಭೆಯು ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ.

Leave a Reply

Your email address will not be published. Required fields are marked *

error: Content is protected !!