ಉದಯವಾಹಿನಿ, ನ್ಯೂಯಾರ್ಕ್: ಅಮೆರಿಕಾದ ಪ್ರಖ್ಯಾತ ಸಾಮಾಜಿಕ ನ್ಯಾಯ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಮ್ಮ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ನಾಪತ್ತೆಯಾಗಿರುವ ಶಂಕಿತನ ಶೋಧಕಾರ್ಯ ಮುಂದುವರೆದಿದೆ.
ಅಕ್ಟೋಬರ್ ೨ ರಂದು ನಡೆದ ಮದುವೆಯಲ್ಲಿ ಪಾಲ್ಗೊಂಡು, ಬಳಿಕ ಹಿಂದಿರುತ್ತಿದ್ದ ವೇಳೆ ಬ್ರೂಕ್ಲಿನ್‌ನ ಕ್ರೌನ್ ಹೈಟ್ಸ್ ನೆರೆಯ ಬಸ್ ನಿಲ್ದಾಣದ ಬಳಿ ರಯಾನ್ ಕಾರ್ಸನ್ (೩೨) ಎಂಬ ಸಾಮಾಜಿಕ ನ್ಯಾಯ ಕಾರ್ತಕರ್ತನನ್ನು ಇರಿದು ಹತ್ಯೆ ನಡೆಸಲಾಗಿತ್ತು. ಸಿಸಿ ಟಿವಿ ಕ್ಯಾಮೆರಾದಲ್ಲಿ ಕಪ್ಪು ಬಣ್ಣದ ವಸ್ತ್ರ ಧರಿಸಿದ ವ್ಯಕ್ತಿಯೊಬ್ಬ ಬಸ್ ನಿಲ್ದಾಣದಲ್ಲಿ ನಿಂತುಕೊಂಡಿದ್ದ ಕಾರ್ಸನ್ ಅವರನ್ನು ಇರಿದು ಹತ್ಯೆ ನಡೆಸಿರುವುದು ಕಂಡುಬಂದಿದೆ. ಅಧಿಕಾರಿಗಳ ಪ್ರಕಾರ ಕಾರ್ಸನ್ ಅವರು ಬಸ್ ನಿಲ್ದಾಣದ ಬಳಿ ಅಪರಿಚಿತನೊಬ್ಬ ಸನಿಹ ಪಾರ್ಕ್ ಮಾಡಲಾಗಿದ್ದ ಸ್ಕೂಟರ್‌ಗಳನ್ನು ಒದೆಯುವುದನ್ನು ನೋಡಿದ ಬಳಿಕ ತನ್ನ ಜೊತೆಗಿದ್ದ ಮಹಿಳೆಯ ಜೊತೆ ಹೊರನಡೆಯಲು ಪ್ರಾರಂಭಿಸಿದ್ದಾರೆ. ಈ ವೇಳೆ ತಂಡವು ಅಶ್ಲೀಲ ರೀತಿಯಲ್ಲಿ ಕೂಗಲು ಪ್ರಾರಂಭಿಸಿದೆ. ಈ ವೇಳೆ ಅಶ್ಲೀಲ ರೀತಿಯಲ್ಲಿ ಕೂಗಿದ ವ್ಯಕ್ತಿ ಹಾಗೂ ತನ್ನ ಬಸ್ ನಿಲ್ದಾಣದ ಬಳಿಯಿದ್ದ ಮಹಿಳೆಯ ನಡುವಿಗೆ ಕಾರ್ಸನ್ ಆಗಮಿಸಿದ್ದಾರೆ. ಇದೇ ವೇಳೆ ಕಾರ್ಸನ್ ಮೇಲೆ ದಾಳಿ ನಡೆಸಲಾಗಿದೆ ಎಂದು ಎನ್‌ವೈಪಿಡಿ ಡಿಟೆಕ್ಟಿವ್ಸ್ ಮುಖ್ಯಸ್ಥ ಜೋಸೆಫ್ ಕೆನ್ನಿ ಅವರು ಸುದ್ದಿಗಾರರಿಗೆ ತಿಳಿಸಿದರು. ಮೂಲಗಳ ಪ್ರಕಾರ ಬಸ್ ನಿಲ್ದಾಣದಲ್ಲಿದ್ದ ಮಹಿಳೆಯು ಶಂಕಿತನ ಗೆಳತಿ ಎಂದು ಹೇಳಲಾಗಿದೆ. ಕಾರ್ಸನ್ ಅವರು ಕಳೆದ ೧೩ ವರ್ಷಗಳಿಂದ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿದ್ದು, ಒಂದು ದಶಕಗಳಿಗಿಂತಲೂ ಹೆಚ್ಚಿನ ಸಮಯ ಅವರು ನ್ಯೂಯಾರ್ಕ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಸಂಶೋಧನಾ ಗುಂಪಿನಲ್ಲಿ ಪ್ರಚಾರ ಅಭಿಯಾನಗಳನ್ನು ನಡೆಸಿದ್ದರು.
