ಉದಯವಾಹಿನಿ, ನವದೆಹಲಿ : ಕಳೆದ ವರ್ಷ ೨೦೨೨ರಿಂದ ಏಪ್ರಿಲ್ ನಿಂದ ಅಕ್ಟೋಬರ್ ನಡುವೆ ೩೮ ಲಕ್ಷ ವಿದೇಶಿಯರು ಭಾರತಕ್ಕೆ ಭೇಟಿ ನೀಡಿದ್ದಾರೆ, ಅದರಲ್ಲಿ ಬಾಂಗ್ಲಾದೇಶಿಗಳು ಅಗ್ರಸ್ಥಾನದಲ್ಲಿದ್ದಾರೆ ಎಂದು ಕೇಂದ್ರ ಸರ್ಕಾರದ ಮಾಹಿತಿ ಈ ವಿಷಯ ತಿಳಿಸಿದೆ.ಒಟ್ಟಾರೆ ೩೮.೩ ಲಕ್ಷಕ್ಕೂ ಹೆಚ್ಚು ವಿದೇಶಿಯರು ಭಾರತಕ್ಕೆ ಭೇಟಿ ನೀಡಿದ್ದಾರೆ, ಬಾಂಗ್ಲಾದೇಶದ ನಾಗರಿಕರು ಗರಿಷ್ಠ ೮.೪ ಲಕ್ಷ ಮಂದಿ ಸೇರಿದ್ದಾರೆ. ಅಮೇರಿಕಾದ ಮಂದಿ ೮ ಲಕ್ಷಕ್ಕೂ ಹೆಚ್ಚು ಮತ್ತು ಇಂಗ್ಲೆಂಡ್ ಪ್ರಜೆಗಳು ೩.೮ ಲಕ್ಷಕ್ಕೂ ಹೆಚ್ಚು ಇದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
೨೦೨೧ ರ ಕ್ಯಾಲೆಂಡರ್ ವರ್ಷಕ್ಕೆ ಹೋಲಿಸಿದರೆ, ಭಾರತಕ್ಕೆ ಬಾಂಗ್ಲಾದೇಶದ ನಾಗರಿಕರ ಆಗಮನದಲ್ಲಿ ಶೇಕಡಾ ೨೫೦ ರಷ್ಟು ಮತ್ತು ಮತ್ತು ಅಮೇರಿಕಾ ಪ್ರಜೆಗಳಲ್ಲಿ ಶೇಕಡಾ ೭೩ ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.
ಗೃಹ ಸಚಿವಾಲಯದ ೨೦೨೨-೨೩ ನೇ ವರ್ಷದ ವಾರ್ಷಿಕ ವರದಿಯ ಪ್ರಕಾರ, ೨೦೨೨ ಮತ್ತು ೨೦೨೧ ರ ನಡುವೆ ಭಾರತಕ್ಕೆ ವಿದೇಶಿ ನಾಗರಿಕರ ಒಟ್ಟು ಆಗಮನ ಶೇಕಡಾ ೧೫೦ ಷರ್ಟು ಹೆಚ್ಚಾಗಿದೆ ಆದರೆ ಕೋವಿಡ್-ಪೂರ್ವ ಅವಧಿಯ ದಟ್ಟಣೆಯು ಇನ್ನೂ ಕಡಿಮೆಯಾಗಿದೆ ಎಂದು ತಿಳಿಸಿದೆ.ಉದಾಹರಣೆಗೆ, ೨೦೧೯ ರ ಕ್ಯಾಲೆಂಡರ್ ವರ್ಷದಲ್ಲಿ ಅಂತರರಾಷ್ಟ್ರೀಯ ಪ್ರವಾಸಿಗರ ಸಂಖ್ಯೆ ೧.೦೯ ಕೋಟಿ ಮತ್ತು ಜನವರಿ ೧, ೨೦೧೮ ರಿಂದ ೨೦೧೯ರ ಮಾರ್ಚ್ ೩೧ರ ತನಕ ೧೫ ತಿಂಗಳ ಅವಧಿಯಲ್ಲಿ ೧.೪ ಕೋಟಿ ಮಂದಿ ಭೇಟಿ ನೀಡಿದ್ದಾರೆ ಎಂದು ಹೇಳಿದೆ.
