ಉದಯವಾಹಿನಿ, ನ್ಯೂಜೆರ್ಸಿ : ಭಾರತೀಯ ಮೂಲದ ದಂಪತಿ ಮತ್ತು ತಮ್ಮಿಬ್ಬರು ಮಕ್ಕಳ ಜೊತೆ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಅಮೆರಿಕಾದ ನ್ಯೂಜೆರ್ಸಿಯ ಪ್ಲೇನ್ಸ್‌ಬೊರೊದಲ್ಲಿ ನಡೆದಿದೆ. ಸದ್ಯ ಪ್ರಕರಣವನ್ನು ಪ್ಲೇನ್ಸ್‌ಬೊರೊ ಪೊಲೀಸ್ ಇಲಾಖೆಯ ಪೊಲೀಸರು ಕೊಲೆ ಶಂಕೆಯ ಮೇರೆಗೆ ತನಿಖೆ ನಡೆಸುತ್ತಿದ್ದಾರೆ.
ತೇಜ್ ಪ್ರತಾಪ್ ಸಿಂಗ್ (೪೩) ಮತ್ತು ಸೋನಾಲ್ ಪರಿಹಾರ್ (೪೨) ದಂಪತಿ ಹಾಗೂ ಕ್ರಮಾವಾಗಿ ೧೦ ಹಾಗೂ ಅರರ ಹರೆಯದ ಮಕ್ಕಳ ಇಬ್ಬರು ಮಕ್ಕಳ ಜೊತೆ ಶವವಾಗಿ ಪತ್ತೆಯಾಗಿದ್ದಾರೆ. ಇಬ್ಬರೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿದ್ದು, ಸ್ಥಳೀಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅದರಲ್ಲೂ ಸಿಂಗ್ ಅವರು ಸ್ಥಳೀಯ ಮಟ್ಟದಲ್ಲಿ ಕ್ರಿಯಾಶೀಲರಾಗಿದ್ದರು ಎನ್ನಲಾಗಿದೆ. ಮಿಡ್ಲ್‌ಸೆಕ್ಸ್ ಕೌಂಟಿ ಪ್ರಾಸಿಕ್ಯೂಟರ್ ಯೋಲಾಂಡಾ ಸಿಕ್ಕೋನ್ ಮತ್ತು ಪ್ಲೇನ್ಸ್‌ಬೊರೊ ಪೊಲೀಸ್ ಇಲಾಖೆಯ ಮುಖ್ಯ ಎಮಾನ್ ಬ್ಲಾಂಚಾರ್ಡ್ ಅವರು ಪ್ರಸ್ತುತ ನರಹತ್ಯೆ ತನಿಖೆಯಲ್ಲಿದೆ ಎಂದು ಘೋಷಿಸಿದ್ದಾರೆ. ಅಕ್ಟೋಬರ್ ೪ರ ವೇಳೆ ಪೊಲೀಸ್ ಇಲಾಖೆಯ ಬಂದ ಕರೆಯ ಹಿನ್ನೆಲೆಯಲ್ಲಿ ಪರಿಶೀಲನೆಗೆ ತೆರಳಿದ ವೇಳೆ ಮನೆಯಲ್ಲಿ ನಾಲ್ವರ ಮೃತದೇಹ ಪತ್ತೆಹಚ್ಚಲಾಗಿದೆ.
