ಉದಯವಾಹಿನಿ, ಮಾಸ್ಕೋ: ಒಂದೆಡೆ ಉಕ್ರೇನ್ ವಿರುದ್ಧ ರಷ್ಯಾ ಅಬ್ಬರದ ದಾಳಿ ಮುಂದುವರೆಸುತ್ತಿದ್ದರೆ ಮತ್ತೊಂದೆಡೆ ಇದೀಗ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಮೆರಿಕಾ ಸೇರಿದಂತೆ ಪಾಶ್ಚಿಮಾತ್ಯ ದೇಶಗಳೇ ಬೆಚ್ಚಿಬೀಳಿಸುವ ಸಂಗತಿ ಹೊರಗೆಡವಿದ್ದಾರೆ. ರಷ್ಯಾದ ಪರಮಾಣು ಚಾಲಿತ ಕ್ರೂಸ್ ಕ್ಷಿಪಣಿಯ ಅಂತಿಮ ಹಂತದ ಪರೀಕ್ಷೆಯು ಯಶಸ್ವಿಯಾಗಿ ನಡೆದಿದೆ ಎಂದು ಇದೀಗ ಪುಟಿನ್ ಘೋಷಿಸಿದ್ದಾರೆ.ನಾವು ಈಗ ಆಧುನಿಕ ರೀತಿಯ ಕಾರ್ಯತಂತ್ರದ ಶಸ್ತ್ರಾಸ್ತ್ರಗಳ ಕೆಲಸವನ್ನು ಪೂರ್ಣಗೊಳಿಸಿದ್ದೇವೆ ಎಂದು ಪುಟಿನ್ ಗುರುವಾರ ಸೋಚಿಯ ಕಪ್ಪು ಸಮುದ್ರದ ರೆಸಾರ್ಟ್‌ನಲ್ಲಿ ನಡೆದ ಸಭೆಯಲ್ಲಿ ಹೇಳಿದರು. ರಷ್ಯಾದ ಬ್ಯೂರೆವೆಸ್ಟ್ನಿಕ್ ಪರಮಾಣು ಚಾಲಿತ ಕ್ರೂಸ್ ಕ್ಷಿಪಣಿಯ ಪರೀಕ್ಷೆಯು ಸನ್ನಿಹಿತವಾಗಿದೆ ಎಂದು ಕೆಲದಿನಗಳ ಹಿಂದೆ ಅಮೆರಿಕಾದ ನ್ಯೂಯಾರ್ಕ್ ಪತ್ರಿಕೆ ವರದಿ ಮಾಡಿತ್ತು. ಆದರೆ ಬಳಿಕ ಈ ವರದಿಯನ್ನು ಪುಟಿನ್ ಅವರ ವಕ್ತಾರರೇ ತಳ್ಳಿಹಾಕಿದ್ದರು. ಆದರೆ ಇದೀಗ ಅಚ್ಚರಿಯ ರೀತಿಯ ಎಂಬಂತೆ ಸ್ವತಹ ಪುಟಿನ್ ಅವರೇ ಪರಮಾಣು ಚಾಲಿತ ಕ್ರೂಸ್ ಕ್ಷಿಪಣಿಯ ಅಂತಿಮ ಹಂತದ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ ಎಂದು ಘೋಷಿಸಿದ್ದಾರೆ. ಆದರೆ ಪುಟಿನ್ ಅವರ ಖಾತೆಯ ವಿವರಗಳ ವಿವರಗಳ ಬಗ್ಗೆ ಯಾವುದೇ ಖಚಿತತೆ ಹೊಂದಿಲ್ಲ. ಅದೂ ಅಲ್ಲದೆ ರಷ್ಯಾದ ರಕ್ಷಣಾ ಸಚಿವಾಲಯದಿಂದ ಇದುವರೆಗೆ ಯಾವುದೇ ಹೇಳಿಕೆಗಳು ಹೊರಬಿದ್ದಿಲ್ಲ. ಆದರೆ ಕಳೆದ ತಿಂಗಳು ಪ್ರಸಾರವಾದ ಉಪಗ್ರಹ ಚಿತ್ರಗಳಲ್ಲಿ ಹಿಂದಿನ ಸೋವಿಯತ್ ಸಮಯದಲ್ಲಿ ಪರಮಾಣು ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದ ಆರ್ಕ್ಟಿಕ್ ದ್ವೀಪ ಸ್ಥಳದಲ್ಲಿ ರಷ್ಯಾ ಇತ್ತೀಚೆಗೆ ಹೊಸ ಸೌಲಭ್ಯಗಳನ್ನು ನಿರ್ಮಿಸಿದೆ ಎಂದು ಸೂಚಿಸಿತ್ತು. ಇದರಲ್ಲಿ ಉತ್ತರ ಬ್ಯಾರೆಂಟ್ಸ್ ಸಮುದ್ರದಲ್ಲಿರುವ ದ್ವೀಪ ದ್ವೀಪಸಮೂಹವಾದ ನೊವಾಯಾ ಜೆಮ್ಲ್ಯಾದಲ್ಲಿ ನಿರ್ಮಾಣ ಕಾರ್ಯವನ್ನು ತೋರಿಸಿದೆ. ಇನ್ನು ೨೦೧೮ರಲ್ಲಿ ಈ ಕ್ಷಿಪಣಿಯು ಆರಂಭಿಕ ಪರೀಕ್ಷಾ ಹಂತಗಳನ್ನು ಘೋಷಿಸಲಾಗಿತ್ತು. ಬಳಿಕ ಕ್ರಮೇಣ ಐದು ವರ್ಷಗಳ ಅವಧಿಯಲ್ಲಿ ಹಲವು ರೀತಿಯ ಪರೀಕ್ಷೆಗಳನ್ನು ನಡೆಸಲಾಗಿತ್ತು ಎನ್ನಲಾಗಿದೆ. ಇನ್ನು ಇದೀಗ ಇದರ ಅಂತಿಮ ಹಂತದ ಪರೀಕ್ಷೆ ಕೂಡ ಯಶಸ್ವಿಯಾಗಿ ನೆರವೇರಿದೆ ಎಂದು ಇದೀಗ ಬಯಲಾಗಿದೆ. ಇನ್ನೂ ಕೆಲವು ಮೂಲಗಳ ಪ್ರಕಾರ ಐದು ವರ್ಷಗಳ ಕೆಲ ಅವಧಿಯಲ್ಲಿ ಕ್ಷಿಪಣಿಯ ಕೆಲವೊಂದು ಪರೀಕ್ಷೆಗಳು ವಿಫಲವಾಗಿತ್ತು ಎಂದು ತಿಳಿಸಿದೆ. ಇನ್ನು ಕ್ಷಿಪಣಿಯು ಸಾಮರ್ಥ್ಯಗಳ ಬಗ್ಗೆ ತಕ್ಷಣದ ಅವಧಿಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

Leave a Reply

Your email address will not be published. Required fields are marked *

error: Content is protected !!