ಉದಯವಾಹಿನಿ, ಕೋಲಾರ: ಕಳೆದ ೬ ದಿನಗಳಿಂದ ಮುಳಬಾಗಿಲು ತಾಲೂಕಿನ ಹಲವು ಕಡೆ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ತಾಲೂಕಿನ ಜನತೆಯಲ್ಲಿ ಬೀತಿಯ ವಾತಾವರಣ ಸೃಷ್ಟಿಯಾಗಿದೆ. ಸೆಪ್ಟೆಂಬರ್ ೨೯ ರಂದು ಮಜರ ಹತ್ತಿಕುಂಟೆ ಮತ್ತು ಚೊಕ್ಕದೊಡ್ಡಿ, ಕಾಡುಕಚ್ಚಿನಹಳ್ಳಿ ಕಡೆ ಚಿರತೆ ಓಡಾಡಿದೆ ಅದೇ ರೀತಿ ಅ.೪ರಂದು ಕೆ.ಬೈಯಪಲ್ಲಿ ರಸ್ತೆಯ ವಿದ್ಯಾನಿಧಿ ಶಾಲೆಯ ಬಳಿ ಕಾಣಿಸಿಕೊಂಡಿದೆ ಎಂದು ಅರಣ್ಯ ಇಲಾಖೆಯ ಜ್ಯೋತಿ ಎಸ್.ಸಿ ಮಾಹಿತಿ ನೀಡಿದ್ದಾರೆ. ಕೆ. ಬಯಪಲ್ಲಿ ರಸ್ತೆಯ ಆಂಧ್ರ ಗಡಿಭಾಗದ ಕಾರೇಟಿಕೊಂಡ ಬೆಟ್ಟದಿಂದ ಚಿರತೆ ಬಂದಿರಬಹುದೆಂದು ಅಂದಾಜು ಮಾಡಲಾಗಿದ್ದು ಅದೇ ರೀತಿ ಚಿರತೆ ಆಂದ್ರ ಕಡೆ ಫಲಾಯನವಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಆವಣಿ, ದೇವರಾಯಸಮುದ್ರ, ಮುಳಬಾಗಿಲು ಅಂಜನಾದ್ರಿ ಬೆಟ್ಟಗಳಲ್ಲಿ ಚಿರತೆಗಳು ಕಾಣಿಸಿಕೊಂಡಿದ್ದರಿಂದ ಈಗಾಗಲೇ ಈ ಬೆಟ್ಟಗಳಲ್ಲಿ ಚಿರತೆಗಳನ್ನು ಹಿಡಿಯಲು ೩ ಬೋನ್‌ಗಳನ್ನು ಇಡಲಾಗಿದ್ದು, ಅದೇ ರೀತಿ ಮಜರ ಅತ್ತಿಕುಂಟೆ, ಚೊಕ್ಕದೊಡ್ಡಿ, ಕಾಡಕಚ್ಚನಹಳ್ಳಿ, ಗುಮ್ಮಲಾಪುರ, ಗ್ರಾಮಗಳಲ್ಲಿ ಬೋನ್‌ಗಳನ್ನು ಇಡಲಾಗಿದೆ. ಚಿರತೆಗಳನ್ನು ಹಿಡಿಯಲು ಹೆಚ್ಚುವರಿ ಬೋನುಗಳು ಅವಶ್ಯಕತೆ ಇರುವುದರಿಂದ ಜಿಲ್ಲಾ ಅರಣ್ಯಾಧಿಕಾರಿಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದು ಆರ್‌ಎಫ್‌ಓ ಜ್ಯೋತಿ ಎಸ್.ಸಿ. ವಿವರಿಸಿದರು.

Leave a Reply

Your email address will not be published. Required fields are marked *

error: Content is protected !!