ಉದಯವಾಹಿನಿ, ಕಲಬುರಗಿ : ನಗರದ ಶಹಾಬಜಾರ್ ಜಗದಂಬಾ ಮಂದಿರದಲ್ಲಿ ್ಲಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜವತಿಯಿಂದ ನವರಾತ್ರಿ ಉತ್ಸವದ ಎರಡನೆಯ ದಿನದ ಅಂಗವಾಗಿ ಸೋಮವಾರ ಶ್ರೀ ಶಿವಪಾರ್ವತಿ ಅಲಂಕಾರ ಪೂಜೆ ಮಾಡಲಾಯಿತು.
ಸಂಜೆ 7 ಗಂಟೆಗೆ ಕೆಕೆಆರ್‍ಡಿಬಿ ಮಾಜಿ ಅಧ್ಯಕ್ಷ ಅಮರನಾಥ ಪಾಟೀಲ,ಉಪ ಮಹಾಪೌರ ಶಿವಾನಂದ ಪಿಸ್ತಿ,ಪಾಲಿಕೆ ಸದಸ್ಯ ಸಚಿನ್ ಕಡಗಂಚಿ
ಅವರಿಂದ ದೀಪ ಬೆಳಗಿಸುವ ಕಾರ್ಯಕ್ರಮ ಜರುಗಿತು.ನಂತರ ಮಕ್ಕಳಿಂದ ದಾಂಡಿಯಾ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಜರುಗಿದವು.ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಶ್ರೀರಾಮ ಪವಾರ,ಉಪಾಧ್ಯಕ್ಷ ಡಾ.ಸುಭಾಷ ಕಮಲಾಪುರೆ, ಕಾರ್ಯದರ್ಶಿ ವಿಷ್ಣುಸಾ ಬಾರಾಡ, ಸಹಕಾರ್ಯದರ್ಶಿ ಡಾ.ಯಶವಂತರಾವ ಮೇಂಗಜಿ,ಖಜಾಂಚಿ ರಾಜೇಂದ್ರ ಹಬೀಬ, ನಾರಾಯಣರಾವ ಹಬೀಬ,ನರಸಿಂಗಸಾ ಪವಾರ, ರಮಾಕಾಂತ ಚವ್ಹಾಣ,ಚಂದು ಚವ್ಹಾಣ,ನರಸಿಂಗ ಮೇಂಗಜಿ,ಕಿಶೋರ ಆರಾಧಿ,ಅಂಬಾದಾಸ ಮಸ್ಕಿನ್,ರಾಧೇಶಾಮ ಚವ್ಹಾಣ ಅವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಎಂದು ರವೀಂದ್ರ ಮೇಂಗಜಿ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!