ಉದಯವಾಹಿನಿ, ಹೊಸಪೇಟೆ : ತಾಲೂಕಿನ ಸೀತಾರಾಮತಾಂಡಾದಲ್ಲಿ ನೂತನವಾಗಿ ನಿರ್ಮಾಣವಾದ ಆರೋಗ್ಯ ವಿಸ್ತೀರ್ಣ ಕೇಂದ್ರಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಎಲ್.ಆರ್.ಶಂಕರ್ ನಾಯ್ಕ ಅವರು ಚಾಲನೆ ನೀಡಿದರು.
ಹೊಸಪೇಟೆ ತಾಲೂಕು ಆಡಳಿತ, ತಾಲೂಕು ಪಂಚಾಯತ್, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶನಿವಾರ ತಾಲೂಕಿನ ಸೀತಾರಾಮತಾಂಡಾ ಆರೋಗ್ಯ ವಿಸ್ತೀರ್ಣ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶಗಳಲ್ಲಿಯೂ ಆರೋಗ್ಯ ಸೇವೆ ದೊರೆಯುವಂತಾಗಲು ಸರ್ಕಾರ ಕೇಂದ್ರದ ಆರಂಭಕ್ಕೆ ಮುಂದಾಗಿದೆ ಚಿಕಿತ್ಸೆ ದೊರೆಯಲಿಲ್ಲಾ ಎಂಬ ಕಾರಣಕ್ಕೆ ತೊಂದರೆಯಾಗಬಾರದುಯ ಎಂದು ಕೇಂದ್ರ ಆರಂಭಿಸಿದ್ದು ಪ್ರಯೋಜನ ಪಡೆಯುವಂತೆ ಕರೆ ನೀಡಿದರು.
ಸೀತಾರಾಮತಾಂಡಾ ಗ್ರಾಮ ಪಂಚಾಯತ್ ಅಧ್ಯಕ್ಷ ಗೋವಿಂದ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಗುರುದತ್, ತಾಲೂಕು ಆರೋಗ್ಯಾಧಿಕಾರಿ ಡಾ ಭಾಸ್ಕರ್ ಡಿ., ಆಡಳಿತ ವೈದ್ಯಾಧಿಕಾರಿ ಡಾ ವಿನೋದ್ ಕುಮಾರ್ ಎಸ್., ಪಿಡಿಓ ಮನ್ಸೂರ್ ಸೇರಿದಂತೆ, ಜನಪ್ರತಿನಿಧಿಗಳು, ಗ್ರಾಮದ ಮುಖಂಡರು, ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
