ಉದಯವಾಹಿನಿ, ವಾಷಿಂಗ್ಟನ್: ಇಸ್ರೇಲ್ ನಲ್ಲಿ ನಡೆಯುತ್ತಿರುವ ಯುದ್ದದಲ್ಲಿ ಹಮಾಸ್ ಉಗ್ರರಿಂದ ಒತ್ತೆಯಾಳುಗಳಾಗಿದ್ದ ಅಮೇರಿಕದ ತಾಯಿ ಮತ್ತು ಮಗಳು ಬಿಡುಗಡೆಗೆ ಮಾಡಿದ ಕ್ರಮ ಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸಂತಸ ವ್ಯಕ್ತಪಡಿಸಿದ್ದಾರೆ. ಉಗ್ರಗಾಮಿ ಗುಂಪು ಇಸ್ರೇಲ್‌ನಿಂದ ಅಪಹರಿಸಿದ ಸುಮಾರು ೨೦೦ ಜನರ ಪೈಕಿ ಅಮೆರಿಕಾದ ಜುಡಿತ್ ರಾನನ್ ಮತ್ತು ಅವರ ೧೭ ವರ್ಷದ ಮಗಳು ನಟಾಲಿಯಾ ಅವರನ್ನು ಮೊನ್ನೆ ಉಗ್ರರರು ಬಿಡುಗಡೆ ಮಾಡಿದ್ದರು.
ತಾಯಿ ಮಗಳೊಂದಿಗೆ ಮಾತನಾಡಿದ ಅಮೇರಿಕಾದ ಅಧ್ಯಕ್ಷ ಜೋ ಬೈಡೆನ್ ಅವರು ನೀವು ಮನೆಗೆ ವಾಪಸ್ ಬರುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ. ನಟಾಲಿಯಾ ಅವರು ಇಸ್ರೇಲ್ ನೀಡಿದ “ಸೇವೆಗಳಿಗಾಗಿ” ಜೋ ಬೈಡೆನ್ ಅವರಿಗೆ ಧನ್ಯವಾದ ಅರ್ಪಿಸಿದರು. ಅವರು ಆರೋಗ್ಯವಾಗಿದ್ದಾರೆ ಎಂದು ಜುಡಿತ್ ಹೇಳಿದ್ದಾರೆ. ಅಕ್ಟೋಬರ್ ೭ ರಂದು ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ ಗಾಜಾದಲ್ಲಿ ಬಂಧಿತರಾಗಿದ್ದ ಇಬ್ಬರು ಅಮೇರಿಕನ್ ನಾಗರಿಕರನ್ನು ಹಮಾಸ್ ಬಿಡುಗಡೆ ಮಾಡಿದೆ. ಕತಾರ್ ಸರ್ಕಾರದೊಂದಿಗಿನ ಒಪ್ಪಂದದಲ್ಲಿ ತಾಯಿ ಮತ್ತು ಆಕೆಯ ಹದಿಹರೆಯದ ಮಗಳನ್ನು ಮುಕ್ತಗೊಳಿಸುತ್ತಿರುವುದಾಗಿ ಫಾಲೆಸ್ತೈನ್ ಉಗ್ರಗಾಮಿ ಗುಂಪು ಹೇಳಿಕೆಯಲ್ಲಿ ತಿಳಿಸಿದೆ.
