ಉದಯವಾಹಿನಿ,ಚೆನ್ನೈ: ನವದೆಹಲಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್‌ ಚೌಹಾಣ್‌ ಮತ್ತು ಪಕ್ಷದ ನಾಯಕ, ಕರ್ನಾಟಕದ ಸಣ್ಣ ನೀರಾವರಿ ಸಚಿವ ಎನ್‌.ಎಸ್‌. ಬೋಸರಾಜು ಅವರನ್ನು ತೆಲಂಗಾಣ ವಿಧಾನಸಭೆ ಚುನಾವಣೆಗೆ ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯು (ಎಐಸಿಸಿ) ವಿಶೇಷ ವೀಕ್ಷಕರಾಗಿ ನೇಮಕ ಮಾಡಿದೆ.
ಇದಲ್ಲದೆ, ಮಾಧ್ಯಮ ಸಿದ್ಧತೆ ವೀಕ್ಷಕರಾಗಿ ತೆಲಂಗಾಣಕ್ಕೆ ಮಾಜಿ ಸಂಸದ ಅಜಯ್‌ ಕುಮಾರ್‌ ಅವರನ್ನು ನೇಮಿಸಲಾಗಿದೆ. ಮಧ್ಯಪ್ರದೇಶಕ್ಕೆ ಪಕ್ಷದ ನಾಯಕಿ ಸುಪ್ರಿಯಾ ಶ್ರೀನೇತ್‌ ಹಾಗೂ ಛತ್ತೀಸಗಢಕ್ಕೆ ರಾಜ್ಯಸಭೆ ಸದಸ್ಯ ಪ್ರಮೋದ್‌ ತಿವಾರಿ ಅವರನ್ನು ನೇಮಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!