ಉದಯವಾಹಿನಿ,ವಾಷಿಂಗ್ಟನ್: ಹಿಂದಿನ ತಪ್ಪುಗಳನ್ನು ಸರಿಪಡಿಸಲು ಅಂತರ್ಗತ ಕಾನೂನು ವ್ಯವಸ್ಥೆ ಅಗತ್ಯವಿದೆ ಎಂದು ಭಾರತದ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ.
ತಪ್ಪುಗಳನ್ನು ಸರಿಪಡಿಸಿ ಸಮಾಜವನ್ನು ಹೆಚ್ಚು ಸಮಾನವಾಗಿಸಲು ನ್ಯಾಯಯುತ ಮತ್ತು ಅಂತರ್ಗತ ಕಾನೂನು ವ್ಯವಸ್ಥೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಅಮೇರಿಕಾ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಲೂಯಿಸ್ ಡೆಂಬಿಟ್ಜ್ ಬ್ರಾಂಡೀಸ್ ಅವರ ಹೆಸರಿನಲ್ಲಿ ೧೯೪೮ ರಲ್ಲಿ ಪ್ರಾರಂಬಿಸಲಾದ ಮ್ಯಾಸಚೂಸೆಟ್ಸ್‌ನ ವಾಲ್ತಾಮ್‌ನಲ್ಲಿರುವ ಬ್ರಾಂಡೀಸ್ ವಿಶ್ವವಿದ್ಯಾಲಯದಲ್ಲಿ ಡಾ ಬಿಆರ್ ಅಂಬೇಡ್ಕರ್ ಪ್ರತಿಮೆ ಅನಾವರಣ ಮಾಡಿ ಮಾತನಾಡಿದರು.
ಡಾ. ಬಿಆರ್. ಅಂಬೇಡ್ಕರ್ ಅವರ ಪರಂಪರೆಯು ಆಧುನಿಕ ಭಾರತದ ಸಾಂವಿಧಾನಿಕ ಮೌಲ್ಯಗಳನ್ನು ರೂಪಿಸುವುದನ್ನು ಮುಂದುವರೆಸಿದೆ, ಸಾಮಾಜಿಕ ಸುಧಾರಣೆ ಮತ್ತು ಎಲ್ಲರಿಗೂ ನ್ಯಾಯದ ಒದಗಿಸಲು ದಾರಿದೀಪವಾಗಿದೆ ಎಂದಿದ್ದಾರೆ.
