ಉದಯವಾಹಿನಿ,ಇಸ್ಲಾಮಾಬಾದ್ : ಪಾಕಿಸ್ತಾನವು ಮಂಗಳವಾರ ‘ಘೋರಿ’ ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತು ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ವಾರವಷ್ಟೇ ‘ಅಬಬೀಲ್’ ಕ್ಷಿಪಣಿಯ ಪ್ರಯೋಗ ಯಶಸ್ವಿಯಾಗಿ ನಡೆಸಿತ್ತು. ಕ್ಷಿಪಣಿಯ ವ್ಯವಸ್ಥೆಯು ಕಾರ್ಯನಿರ್ವಹಣೆ ಮತ್ತು ತಾಂತ್ರಿಕವಾಗಿ ಕರಾರುವಕ್ಕಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಪ್ರಯೋಗ ನಡೆಸಲಾಯಿತು ಎಂದು ತಿಳಿಸಿದೆ.
ಸೇನೆಯ ಎಎಸ್‌ಎಫ್‌ಸಿ ತುಕಡಿಯ ಕಮಾಂಡರ್, ಹಿರಿಯ ಅಧಿಕಾರಿಗಳು, ವಿಜ್ಞಾನಿಗಳು, ಎಂಜಿನಿಯರ್‌ಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಪಾಕಿಸ್ತಾನದ ಕ್ಷಿಪಣಿ ಕಾರ್ಯಕ್ರಮಕ್ಕೆ ಅಗತ್ಯವಿರುವ ಪರಿಕರ ಪೂರೈಸಿದ ಚೀನಾದ ಮೂರು ಕಂಪನಿಗಳ ಮೇಲೆ ಅಮೆರಿಕವು ನಿರ್ಬಂಧ ವಿಧಿಸಿದ ಬೆಳವಣಿಗೆಯ ನಂತರ ಪಾಕಿಸ್ತಾನವು ಈ ಕ್ಷಿಪಣಿ ಪ್ರಯೋಗ ಕೈಗೊಂಡಿದೆ. ಪಾಕಿಸ್ತಾನಕ್ಕೆ ಅಗತ್ಯವಿರುವ ಸೇನಾ ಪರಿಕಗಳನ್ನು ಚೀನಾ ಪ್ರಮುಖವಾಗಿ ಪೂರೈಸುತ್ತಿದೆ.

Leave a Reply

Your email address will not be published. Required fields are marked *

error: Content is protected !!