ಉದಯವಾಹಿನಿ, ಚೆನ್ನೈ : ಹೊರವಲಯದ ಊರಪಕ್ಕಂ ಬಳಿ ಮೂವರು ಬಾಲಕರ ಮೇಲೆ ಉಪನಗರ ರೈಲು ಹರಿದಿದೆ.
ಮೂವರು ಬಾಲಕರು ಕರ್ನಾಟಕದವರಾಗಿದ್ದು, ಹಳಿ ದಾಟುವಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಬಾಲಕರು ಸಹೋದರರಾಗಿದ್ದು, ಅವರಿಗೆ ವಾಕ್‌ ಮತ್ತು ಶ್ರವಣ ದೋಷ ಇತ್ತು.
ಇನ್ನೊಬ್ಬ ಬಾಲಕನಿಗೆ ಮಾತು ಬರುತ್ತಿರಲಿಲ್ಲ ಎಂದು ವಿವರಿಸಿದ್ದಾರೆ. ಬಾಲಕರ ಪೋಷಕರು ಚೆನ್ನೈನಲ್ಲಿ ದಿನಗೂಲಿ ಮಾಡುತ್ತಿದ್ದರು.
ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!