ಉದಯವಾಹಿನಿ, ಮುಂಬೈ : ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಚಳಿಗಾಲದ ವೇಳಾಪಟ್ಟಿ ಪ್ರಕಟಿಸಲಾಗಿದೆ. ಸದ್ಯದ ಮಾಹಿತಿ ಪ್ರಕಾರ ೧೧೫ ವಿವಿಧ ಸ್ಥಳಗಳಿಗೆ ಪ್ರತಿನಿತ್ಯ ೯೭೫ ವಿಮಾನ ಸಂಚಾರ ಸೇವೆ ಆರಂಭವಾಗಲಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಚಳಿಗಾಲದ ವೇಳಾಪಟ್ಟಿ ಇದೇ ೨೯ ರಿಂದ ಮುಂದಿನ ವರ್ಷ ಮಾರ್ಚ್ ೩೦ರ ಇರಲಿದೆ ಎಂದು ಮುಂಬೈ ವಿಮಾನ ನಿಲ್ದಾಣದ ಪ್ರಾಧಿಕಾರ ಈ ವಿಷಯ ತಿಳಿಸಿದೆ.
ಈ ಬಾರಿಯ ಚಳಿಗಾಲದ ವೇಳಾಪಟ್ಟಿಯನ್ನು ೨೦೨೨ ರ ಚಳಿಗಾಲದ ವೇಳಾಪಟ್ಟಿಗೆ ಹೋಲಿಸಿದರೆ ಶೇಕಡಾ ೮ ರಷ್ಟು ವಿಮಾನ ಸಂಚಾರದ ಹೆಚ್ಚಳ ಕಂಡಿದೆ. ೯೭೫ ಕ್ಕೂ ಹೆಚ್ಚು ದೈನಂದಿನ ವಿಮಾನ ೧೧೫ಕ್ಕೂ ಹೆಚ್ಚು ಸ್ಥಳಗಳಿಗೆ ಹಾರಾಟ ನಡೆಸಲಿದೆ ಎಂದು ತಿಳಿಸಲಾಗಿದೆ.
ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಝಾಕಿಸ್ತಾನ್‌ನ ಅಲ್ಮಾಟಿ ಮತ್ತು ಇಂಡೋನೇಷ್ಯಾದ ಬಾಲಿಗೆ ಹೊಸ ನಿರೀಕ್ಷಿತ ಅಂತರಾಷ್ಟ್ರೀಯ ಮಾರ್ಗಗಳೊಂದಿಗೆ ವಿಮಾನ ಕಾರ್ಯಾಚರಣೆ ವಿಸ್ತರಿಸುತ್ತಿದೆ, ಜೊತೆಗೆ ಏರ್ ಕೆನಡಾ ಮತ್ತು ಅಜರ್‍ಬೈಜಾನ್ ಏರ್‍ಲೈನ್ಸ್‌ನ ಕಾರ್ಯಾಚರಣೆ ಪುನರಾರಂಭ ಮಾಡುತ್ತಿದೆ ಎಂದು ತಿಳಿಸಲಾಗಿದೆ.
